ನವದೆಹಲಿ: ಭಾರತೀಯ ರೈಲ್ವೆ ಇದುವರೆಗೆ 960 ರೈಲ್ವೆ ನಿಲ್ದಾಣಗಳನ್ನು ಸೌರ ವಿದ್ಯುತ್ಗೆ ಪರಿವರ್ತಿಸಿದೆ ಮತ್ತು 2030 ರ ವೇಳೆಗೆ ನೆಟ್ ಝೀರೋ ಕಾರ್ಬನ್ ಎಮಿಷನ್ ರೈಲ್ವೆ ಆಗಲು ಸನಿಹವಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದ್ದಾರೆ.
ಟ್ವಿಟ್ ಮಾಡಿರುವ ಅವರು, ʼಭಾರತೀಯ ರೈಲ್ವೆ, ಹಸಿರು ರೈಲ್ವೆʼ ಮಿಷನ್ ಮೋಡ್ನಲ್ಲಿದೆ. ರೈಲ್ವೆ 960 ರೈಲ್ವೆ ನಿಲ್ದಾಣಗಳನ್ನು ಸೌರ ವಿದ್ಯುತ್ಗೆ ಪರಿವರ್ತಿಸಿದೆ ಮತ್ತು 2030 ರ ವೇಳೆಗೆ ನೆಟ್ ಝೀರೋ ಕಾರ್ಬನ್ ಎಮಿಷನ್ ರೈಲ್ವೆ ಆಗಲು ಸನಿಹವಾಗುತ್ತಿದೆ ಎಂದಿದ್ದಾರೆ.
“ಎಲ್ಲಾ ವಿದ್ಯುತ್ ಅಗತ್ಯಗಳಿಗಾಗಿ 100% ಸ್ವಯಂ-ಸುಸ್ಥಿರವಾಗಬೇಕೆಂಬ ಉದ್ದೇಶವನ್ನು ಸಾಧಿಸಲು ಮತ್ತು ರಾಷ್ಟ್ರೀಯ ಸೌರಶಕ್ತಿ ಗುರಿಗಳಿಗೆ ಸಹಕಾರಿಯಾಗಲು, ಭಾರತೀಯ ರೈಲ್ವೆ 960 ಕ್ಕೂ ಹೆಚ್ಚು ನಿಲ್ದಾಣಗಳನ್ನು ಇಲ್ಲಿಯವರೆಗೆ ಸೌರೀಕರಣಗೊಳಿಸಿದೆ” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಸೌರ ವಿದ್ಯುತ್ಗೆ ಪರಿವರ್ತನೆಗೊಂಡ ಕೆಲವು ನಿಲ್ದಾಣಗಳಲ್ಲಿ ವಾರಣಾಸಿ, ನವದೆಹಲಿ, ಹಳೆ ದೆಹಲಿ, ಜೈಪುರ, ಸಿಕಂದರಾಬಾದ್, ಕೋಲ್ಕತಾ, ಗುವಾಹಟಿ, ಹೈದರಾಬಾದ್ ಮತ್ತು ಹೌರಾ ಸೇರಿವೆ. ರೈಲ್ವೆ ಸಚಿವಾಲಯದ ಪ್ರಕಾರ, ಕಾರ್ಯಗತಗೊಳ್ಳುತ್ತಿರುವ 550 ನಿಲ್ದಾಣಗಳಿಗಾಗಿ ಸುಮಾರು 198 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿಗೆ ಆದೇಶಗಳನ್ನು ನೀಡಲಾಗಿದೆ.
ಭಾರತೀಯ ರೈಲ್ವೆ ತನ್ನ ಖಾಲಿ ಭೂಮಿಯನ್ನು 2030 ರ ವೇಳೆಗೆ ಬಳಸಿಕೊಳ್ಳುವ ಮೂಲಕ 20 ಜಿವ್ಯಾಟ್ ಸಾಮರ್ಥ್ಯದ ಸೌರ ಸ್ಥಾವರಗಳನ್ನು ಸ್ಥಾಪಿಸುವ ಮೆಗಾ ಯೋಜನೆಯನ್ನು ಸಹ ಹೊಂದಿದೆ.
Indian Railways, Green Railways: In mission mode, Railways solarises 960 Railway Stations, and moves closer to becoming a Net Zero Carbon Emission Railway by 2030 ☀️
📖 https://t.co/u1xpwDqrSS pic.twitter.com/BZvEkpn02H
— Piyush Goyal (@PiyushGoyal) August 31, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.