ಟೊರಂಟೊ: ಬಲವಂತವಾಗಿ ಕಣ್ಮರೆಯಾದ ಸಂತ್ರಸ್ಥರ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕೆನಡಾದ ವಿಶ್ವ ಸಿಂಧಿ ಕಾಂಗ್ರೆಸ್, ಬಲೂಚ್ ನ್ಯಾಷನಲ್ ಮೂಮೆಂಟ್, ಕೆನಡಾ ಪಾಶ್ತೂನ್ ಕೌನ್ಸಿಲ್, ಪಾಶ್ತೂನ್ ತಹಫೂಜ್ ಮೂಮೆಂಟ್, ಸಂಘಟನೆಗಳ ಸದಸ್ಯರು ಪಾಕಿಸ್ಥಾನ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಉಗ್ರರ ತವರಿನಂತೆ ಅವರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ಥಾನ ವಿಶ್ವದ ನಕ್ಷೆಯಿಂದ ಮರೆಯಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಸಂಘಟನೆಗಳು ವ್ಯಕ್ತಪಡಿಸಿದವು.
ಟೊರಂಟೊದ ಡೌನ್ಟೌನ್ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಾಕಿಸ್ಥಾನದಲ್ಲಿ ಜನರು ಕಣ್ಮರೆಯಾಗುವುದು, ಬಲವಂತದ ಮತಾಂತರ, ಹತ್ಯೆ ಮೊದಲಾದವುಗಳು ಯಥೇಚ್ಛವಾಗಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಕ್ರಮ ಕೈಗೊಂಡು ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಬಲೂಚ್, ಮೊಹಜಿರ್ಸ್, ಪ್ರಾಶ್ತೂನ್ಸ್ ಮತ್ತು ಸಿಂಧ್ ಸಮುದಾಯಗಳ ಮಾನವ ಹಕ್ಕುಗಳನ್ನು ಪುನಃಸ್ಥಾಪಿಸಲು ಪಾಕಿಸ್ಥಾನ ಸರ್ಕಾರದ ಮೇಲೆ ಒತ್ತಡ ಹೇರುವಂತೆಯೂ ಕೆನಡಾ ಸರ್ಕಾರವನ್ನು ಒತ್ತಾಯಿಸಲಾಯಿತು.
ಜಗತ್ತಿನ ಅನೇಕ ಭಾಗಗಳಲ್ಲಿ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆಗಳು ಸಾಮಾನ್ಯವಾಗಿ ಬಿಟ್ಟಿವೆ. ಪಾಕ್ನ ಸೇನೆ ಮತ್ತು ಗುಪ್ತಚರ ಇಲಾಖೆಗಳು ಸಹ ಅಲ್ಲಿನ ಅಲ್ಪಸಂಖ್ಯಾತರ ಅಪಹರಣ ನಡೆಸುತ್ತಿವೆ ಎಂದು ನ್ಯೂಯಾರ್ಕ್ನ ಪಾಕಿಸ್ಥಾನ ರಾಯಭಾರಿ ಕಛೇರಿಯ ಮುಂದೆ, ಇಂಗ್ಲೆಂಡ್ ಸಂಸತ್ ಭವನ, ಪ್ರಧಾನಿ ಬೋರಿಸ್ ನಿವಾಸದೆದುರು ಸಹ ಈ ಹಿಂದೆ ಪ್ರತಿಭಟನೆಗಳು ನಡೆದಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.