ನವದೆಹಲಿ: ಕೊರೋನಾ ಮಹಾಮಾರಿಯ ಸಂಕಷ್ಟದ ನಡುವಲ್ಲೇ ಲಡಾಕ್ನ ಗಲ್ವಾನ್ ಗಡಿಯಲ್ಲಿ ಚೀನಾ ಕಾಲ್ಕೆರೆದುಕೊಂಡು ಕ್ಯಾತೆ ತೆಗೆಯುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಭಾರತ ಇದೀಗ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಯುದ್ಧ ನೌಕೆಯನ್ನು ನಿಯೋಜನೆ ಮಾಡಿದೆ.
ಈ ಸಮುದ್ರ ಪ್ರದೇಶದಲ್ಲಿ 2009 ರಿಂದ ತೊಡಗಿದಂತೆ ಚೀನಾ ಏಕಸ್ವಾಮ್ಯದ ಹಕ್ಕು ಸ್ಥಾಪನೆಗೆ ಪ್ರಯತ್ನ ನಡೆಸುತ್ತಿದೆ. ಇಲ್ಲಿ ಯುದ್ಧ ನೌಕೆಗಳನ್ನು ನಿಯೋಜಿಸುವುದು, ಕೃತಕ ದ್ವೀಪಗಳ ಸೃಷ್ಟಿ ಮೊದಲಾದವುಗಳನ್ನೂ ಮಾಡುತ್ತಿದೆ. ಸದ್ಯ ಇದೇ ಪ್ರದೇಶದಲ್ಲಿ ಭಾರತ ತನ್ನ ಯುದ್ಧ ನೌಕೆಯನ್ನು ನಿಯೋಜನೆ ಮಾಡುವ ಮೂಲಕ ಚೀನಾಗೆ ಮತ್ತೊಮ್ಮೆ ಸಡ್ಡು ಹೊಡೆದಿದೆ. ಗಲ್ವಾನ್ನಲ್ಲಿ ಚೀನಾದ ದಾಳಿಯಿಂದ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತ ಇಂತಹ ಒಂದು ಮಹತ್ವದ ಕ್ರಮಕ್ಕೆ ಮುಂದಡಿ ಇಟ್ಟಿದ್ದು, ಇದು ಚೀನಾಗೆ ಬಿಸಿ ತುಪ್ಪದಂತೆ ಪರಿಣಮಿಸಿದೆ.
ಸದ್ಯ ಭಾರತ ನಿಯೋಜನೆ ಮಾಡಿರುವ ಈ ಯುದ್ಧ ನೌಕೆ ಇತರ ರಾಷ್ಟ್ರಗಳ ಸೇನಾ ಚಟುವಟಿಕೆಯ ಮೇಲೆಯೂ ಗಮನ ಹರಿಸಿದೆ. ಅಲ್ಲದೆ ಅಮೆರಿಕ ನಿಯೋಜನೆ ಮಾಡಿರುವ ಯುದ್ಧ ನೌಕೆಯ ಜೊತೆಗೂ ಸಂವಹನ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಭಾರತದ ಈ ನಡೆಗೆ ಚೀನಾ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. ಜೊತೆಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿಯೂ ಚೀನಾ ಈ ವೀವಿಚಾರಕ್ಕೆ ಚಕಾರ ಎತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.