ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ಬಿಜೆಪಿ ವತಿಯಿಂದ ಒಂದು ವಾರಗಳ ಕಾಲ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲು ಪಕ್ಷ ನಿರ್ಧರಿಸಿದೆ.
ಸೆಪ್ಟೆಂಬರ್ ತಿಂಗಳ 17 ರಂದು ಮೋದಿ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಸೆ. 14-20ರ ವರೆಗೆ ದೇಶದೆಲ್ಲೆಡೆ ‘ಸೇವಾ ಸಪ್ತಾಹ’ ನಡೆಸಲು ಮುಂದಾಗಿದೆ. ಈ ಸಪ್ತಾಹದಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲು ರೂಪು ರೇಶೆಗಳನ್ನು ಹಾಕಿಕೊಂಡಿದ್ದಾರೆ. ಈ ಸಂಬಂಧ ಎಲ್ಲಾ ರಾಜ್ಯಗಳ ಪಕ್ಷದ ಮುಖ್ಯಸ್ಥರಿಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸುತ್ತೋಲೆಗಳನ್ನು ಕಳುಹಿಸಲಾಗಿದೆ.
ಈ ಬಾರಿ 70ನೇ ವರ್ಷದ ಜನ್ಮದಿನವಾಗಿದ್ದು, ಥೀಮ್ ಸೆವೆಂಟಿಗೆ ಅನುಗುಣವಾಗುವಂತೆ ನಡೆಸಲಾಗುವ ಎಪ್ಪತ್ತು ಕಾರ್ಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಈ ಸಂಬಂಧ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳ ಪಕ್ಷದ ವಕ್ತಾರರಿಗೆ ನೀಡಿದ್ದಾರೆ. 70 ಮಂದಿಗೆ ಕೃತಕ ಕೈ ಕಾಲು ಜೋಡಣೆ, 70 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಸೇರಿದಂತೆ ಇನ್ನೂ ಅನೇಕ 70 ಗಳ ಕಾರ್ಯಕ್ರಮವನ್ನು ಈ ಸಪ್ತಾಹದಲ್ಲಿ ನಡೆಸಲು ಸೂಚನೆ ನೀಡಲಾಗಿದೆ.
ಅದರಂತೆ ನಮೋ 70 ರ ಸಂಭ್ರಮಕ್ಕೆ ಮೋದಿ ಅವರ ವೆಬಿನಾರ್ ಕಾರ್ಯಕ್ರಮ ‘ಲೈವ್ ಆಂಡ್ ಮಿಷನ್’ ಸಮ್ಮೇಳನವನ್ನೂ ಆಯೋಜನೆ ಮಾಡಲಾಗುವುದಾಗಿ ಪಕ್ಷ ತಿಳಿಸಿದೆ. ದೇಶದಲ್ಲಿನ ಪಕ್ಷದ ಎಲ್ಲಾ ಕಾರ್ಯಕರ್ತರು ಈ ಸಪ್ತಾಹದಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಪಾಲಿಸುವ ಮೂಲಕ ಭಾಗವಹಿಸುವಂತೆ ಸೂಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಮೋದಿ ಅವರ ಸಾಧನೆಗಳನ್ನು ಪ್ರಚಾರ ಪಡಿಸುವಂತೆಯೂ ಸೂಚನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.