ನವದೆಹಲಿ: ಭಾನುವಾರ ರಷ್ಯಾದೊಂದಿಗೆ ಆನ್ಲೈನ್ ಚೆಸ್ ಒಲಿಂಪಿಯಾಡ್ನ ಜಂಟಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಚೆಸ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “FIDE ಆನ್ಲೈನ್ ಚೆಸ್ ಒಲಿಂಪಿಯಾಡ್ ಗೆದ್ದ ನಮ್ಮ ಚೆಸ್ ಆಟಗಾರರಿಗೆ ಅಭಿನಂದನೆಗಳು. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶ್ಲಾಘನೀಯ. ಅವರ ಯಶಸ್ಸು ಖಂಡಿತವಾಗಿಯೂ ಇತರ ಚೆಸ್ ಆಟಗಾರರನ್ನು ಪ್ರೇರೇಪಿಸುತ್ತದೆ. ರಷ್ಯಾದ ತಂಡವನ್ನೂ ನಾನು ಅಭಿನಂದಿಸುತ್ತೇನೆ” ಎಂದಿದ್ದಾರೆ
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಕೂಡ ಭಾರತೀಯ ತಂಡವನ್ನು ದೇಶಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದಕ್ಕಾಗಿ ಅಭಿನಂದಿಸಿದರು.
“ಇದು ಭಾರತೀಯ ಕ್ರೀಡೆಗಳಿಗೆ ಅದ್ಭುತ ವಾರಾಂತ್ಯವಾಗಿದೆ. ನಾವು ನ್ಯಾಷನಲ್ ಸ್ಪೋರ್ಟ್ಸ್ ಡೇ ಅನ್ನು ಆಚರಿಸಿದ ಒಂದು ದಿನದ ನಂತರ, ನಮ್ಮ ಚೆಸ್ ತಂಡವು ಜಂಟಿ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
“FIDE ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನ ಗೆದ್ದ ನಮ್ಮ ಭಾರತೀಯ ತಂಡವನ್ನು ನಾನು ಅಭಿನಂದಿಸುತ್ತೇನೆ. ಭಾರತವನ್ನು ರಷ್ಯಾದೊಂದಿಗೆ ಜಂಟಿ ವಿಜೇತ ಎಂದು ಘೋಷಿಸಲಾಗಿದೆ. ಎಲ್ಲಾ ಆಟಗಾರರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು” ಎಂದು ಕ್ರೀಡಾ ಸಚಿವ ಕಿರೆನ್ ರಿಜ್ಜು ಟ್ವೀಟ್ ಮಾಡಿದ್ದಾರೆ.
Congratulations to our chess players for winning the FIDE Online #ChessOlympiad. Their hard work and dedication are admirable. Their success will surely motivate other chess players. I would like to congratulate the Russian team as well.
— Narendra Modi (@narendramodi) August 30, 2020
What a wonderful weekend this has been for Indian Sports. A day after we celebrated #NationalSportsDay, our Chess Team brings laurels by becoming joint champions.
Congrats @vishy64theking & the entire team.#ChessOlympiad https://t.co/9Q41Abx4pj— Sachin Tendulkar (@sachin_rt) August 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.