ಪ್ಯಾರಿಸ್: ಕೊರೋನಾ ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಿದ ನಂತರದಲ್ಲಿ, ಕೊರೋನಾ ತವರು ಎಂದೇ ಬಿಂಬಿತವಾಗಿರುವ ಚೀನಾಗೆ ಪಾಠ ಕಲಿಸಲು ಜಗತ್ತಿನ ಅನೇಕ ರಾಷ್ಟ್ರಗಳು ಕ್ರಮ ಕೈಗೊಂಡಿವೆ. ಇದರಲ್ಲಿ ಭಾರತ, ಅಮೆರಿಕಾವು ಸೇರಿದೆ.
ಸದ್ಯ ಚೀನಾದ ಹುವಾಯ್ ಕಂಪೆನಿಯನ್ನು 5 ಜಿ ಮತ್ತು ಮಾಹಿತಿ ತಂತ್ರಜ್ಞಾನ, ಟೆಲೆಕಾಂ ವಿಚಾರಗಳಿಗೆ ಸಂಬಂಧಿಸಿದಂತೆ ಬಳಕೆ ಮಾಡದಿರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹುವಾಯ್ ಬದಲು ಯುರೋಪ್ನ ಕಂಪೆನಿಗಳ ಉತ್ಪನ್ನಗಳನ್ನು ಬಳಕೆ ಮಾಡಲಾಗುವುದು ಎಂದು ತಿಳಿಸಿದೆ. ದೇಶದ ಆಂತರಿಕ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಹುವಾಯ್ ಮೇಲೆ ನಿಷೇಧ ಹೇರದಿದ್ದರೂ, ಅದನ್ನು ಬಳಕೆ ಮಾಡದಿರುವುದಾಗಿ ಫ್ರಾನ್ಸ್ ಮಾಹಿತಿ ನೀಡಿದೆ.
ಈ ಹಿಂದೆ ದೇಶದ ಭದ್ರತಾ ಹಿತದೃಷ್ಟಿಯಿಂದ, ಸುರಕ್ಷತೆಗಾಗಿಯೇ ಅಮೆರಿಕಾವೂ ಚೀನಾ ತಂತ್ರಜ್ಞಾನಗಳನ್ನು ನಿಷೇಧ ಮಾಡುವುದಾಗಿ ತಿಳಿಸಿತ್ತು. ಭಾರತದ ಗಲ್ವಾನ್ ಗಡಿಯಲ್ಲಿ ಚೀನಾ ತಂಟೆ ಆರಂಭ ಮಾಡಿದ ಬಳಿಕ ಮತ್ತು ಕೊರೋನಾ ಕಾರಣದಿಂದ ಭಾರತದಿಂದಲೂ ಚೀನಾ ತಂತ್ರಜ್ಞಾನಗಳಿಗೆ ನಿಷೇಧ ಹೇರಲಾಗಿತ್ತು. ಆ ಮೂಲಕ ಆರ್ಥಿಕ ಹೊಡೆತ ನೀಡಲಾಗಿತ್ತು. ಇದೀಗ ಫ್ರಾನ್ಸ್ ಸಹ ಹುವಾಯ್ ಬಳಸುವುದಿಲ್ಲ ಎಂದು ತಿಳಿಸುವ ಮೂಲಕ ಚೀನಾಗೆ ಮತ್ತೊಂದು ಹೊಡೆತ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.