ನವದೆಹಲಿ: ರೈಲ್ವೆ ಟ್ರ್ಯಾಕ್ ಪರಿಶೀಲನೆ ಮತ್ತು ದುರಸ್ಥಿಯ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಭಾರತೀಯ ರೈಲ್ವೆ, ‘ರೈಲ್ವೆ ಬೈಸಿಕಲ್’ ಒಂದನ್ನು ಅನ್ವೇಷಣೆ ಮಾಡಿದೆ.
ಈ ಬೈಸಿಕಲ್ ಅನ್ನು ಗಂಟೆಗೆ 15 ಕಿಮೀಗಳ ವರೆಗೆ ತುಳಿಯಲು ಸಾಧ್ಯವಿದ್ದು, 30 ಕೆಜಿ ಗಳಷ್ಟು ತೂಕ ಇರುವುದಾಗಿಯೂ ಮೂಲಗಳು ತಿಳಿಸಿವೆ. ಈ ರೈಲ್ವೆ ಬೈಸಿಕಲ್ ಅನ್ನು ಈಸ್ಟ್ ಕೋಸ್ಟ್ ರೈಲ್ವೆ ವಿಭಾಗ ಆವಿಷ್ಕಾರ ಮಾಡಿದೆ. ಈ ಬೈಸಿಕಲ್ಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಕಳೆದ ಜುಲೈ ತಿಂಗಳಿನಲ್ಲಿಯೇ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ್ದರು.
ಈ ವರೆಗೆ ರೈಲು ಹಳಿಗಳ ಪರಿಶೀಲನೆಗೆ ಮತ್ತು ದುರಸ್ಥಿಗೆ ಸಂಬಂಧಿಸಿದಂತೆ ಸಿಬ್ಬಂದಿಗಳು ಕಾಲ್ನಡಿಗೆಯನ್ನೇ ಅನುಸರಿಸಬೇಕಿತ್ತು. ಮುಂದಿನ ದಿನಗಳಲ್ಲಿ ಈ ಕೆಲಸಗಳಿಗಾಗಿ ಸಿಬ್ಬಂದಿಗಳಿಗೆ ಈ ನೂತನ ತಂತ್ರಜ್ಞಾನ ಸಹಾಯ ಮಾಡಲಿದೆ. ಸಾಧಾರಣವಾಗಿ ಬಳಕೆ ಮಾಡುವ ಸೈಕಲ್ಗೆ ಕಬ್ಬಿಣದ ರಾಡ್ಗಳನ್ನು ಲಿಂಕ್ ಮಾಡಿ ಹಳಿಗಳ ಮೇಲೆ ನಿಯಂತ್ರಣ ತಪ್ಪದಂತೆ ಈ ಸೈಕಲ್ ಅನ್ನು ಸಿದ್ಧಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಈಗಾಗಲೇ ಖುರ್ಡಾ ವಿಭಾಗದಲ್ಲಿ ಸಿಬ್ಬಂದಿಗಳು ಬಳಕೆ ಮಾಡಲು ಆರಂಭಿಸಿದ್ದಾರೆ.
ಸದ್ಯದ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಬೈಸಿಕಲ್ ಅನ್ನು ಬಳಕೆ ಮಾಡಬಹುದಾಗಿದೆ ಎಂದು ರೈಲ್ವೆ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.