ನವದೆಹಲಿ: 2030 ರ ವೇಳೆಗೆ ತನ್ನ 33 ಬಿಲಿಯನ್ ಯುನಿಟ್ಗಳ ಇಂಧನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆ ತನ್ನ ಹೆಚ್ಚುವರಿ ಭೂಮಿಯಲ್ಲಿ 20 ಜಿವ್ಯಾಟ್ (ಗಿಗಾವಾಟ್) ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಮುಂದಾಗಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಭಾರತೀಯ ರೈಲ್ವೆ ತನ್ನ ಹೆಚ್ಚುವರಿ ಭೂಮಿಯಲ್ಲಿ ತನ್ನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ‘ಮೇಡ್ ಇನ್ ಇಂಡಿಯಾ’ ಸೌರ ಅಥವಾ ಗಾಳಿ ಸಾಧನಗಳಿಂದ 20 ಜಿವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಲು ಯೋಜಿಸಿದೆ” ಎಂದು ಹೇಳಿದರು.
‘ಶಕ್ತಿಶಾಲಿ ಜೀವನೋಪಾಯಗಳು: ಭಾರತದ ಗ್ರಾಮೀಣ ಆರ್ಥಿಕತೆಯನ್ನು ಶುದ್ಧ ಇಂಧನ ಪರಿಹಾರಗಳೊಂದಿಗೆ ಪರಿವರ್ತಿಸುವುದು’ ಎಂಬ ಸಿಇಇಇ ಇಂಡಿಯಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರೈಲ್ವೆ ಸಚಿವರು ಈ ವಿಷಯ ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ಭಾರತೀಯ ರೈಲ್ವೆ ಶೇ 100 ರಷ್ಟು ವಿದ್ಯುತ್ ಚಾಲಿತ ರೈಲು ಜಾಲವಾಗಲಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ವಿದ್ಯುದ್ದೀಕೃತ ಜಾಲವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.
“ನಾವು 20 ಜಿವ್ಯಾಟ್ (ಗಿಗಾವಾಟ್) ಸೌರ ವಿದ್ಯುತ್ ಅನ್ನು ಉತ್ಪಾದಿಸಲು ಹಳಿಗಳ ಉದ್ದಕ್ಕೂ ಇರುವ ಮತ್ತು ಇತರ ಕಡೆ ಇರುವ ಹೆಚ್ಚುವರಿ ರೈಲ್ವೆ ಭೂಮಿಯನ್ನು ಬಳಸಲು ಯೋಜಿಸಿದ್ದೇವೆ. ‘ಮೇಡ್ ಇನ್ ಇಂಡಿಯಾ’ ಸೌರ ಅಥವಾ ಗಾಳಿ ಉಪಕರಣಗಳು ನಮಗೆ 20 ಜಿಡಬ್ಲ್ಯೂ ಉತ್ಪಾದನಾ ಸಾಮರ್ಥ್ಯದ ನವೀಕರಿಸಬಹುದಾದ ಶಕ್ತಿಯನ್ನು ನೀಡಲಿವೆ” ಎಂದು ಗೋಯಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.