ಒಡಿಶಾ: ರಾಜ್ಯದ ಬೋಳಂಗಿರ್ನ ಬೊಂಗೊಮುಂಡದ ಹುಡುಗಿ ಶೀತಲ್ ಜೈನ್ ಅವರು ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವ ವಿದ್ಯಾಲಯದ ಪಿ.ಎಚ್ಡಿ ಪಡೆಯಲು ಆಯ್ಕೆಯಾಗಿದ್ದಾರೆ. ವಿಶ್ವದ 54 ಜನರು ಆಯ್ಕೆಯಾಗಿದ್ದು, ಇದರಲ್ಲಿ ಭಾರತದ ಶೀತಲ್ ಸಹ ಒಬ್ಬರಾಗಿದ್ದು, ಆಕ್ಸ್ಫರ್ಡ್ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರತಿನಿಧಿ ಎಂದೆನಿಸಿಕೊಂಡಿದ್ದಾರೆ.
ಈ ಸಂಬಂಧ ಹರ್ಷ ವ್ಯಕ್ತಪಡಿಸಿರುವ ಶೀತಲ್, ಈ ಅವಕಾಶವನ್ನು ಗಿಟ್ಟಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಾಗಿದೆ ಎಂದರೆ ಅದಕ್ಕೆ ನನ್ನ ತಂದೆಯೇ ಕಾರಣ. ಅವರ ಸ್ಫೂರ್ತಿ, ಅಧ್ಯಯನದ ವಿಚಾರದಲ್ಲಿ ನನಗೆ ಅವರು ನೀಡಿರುವ ಬೆಂಬಲದ ಕಾರಣದಿಂದಲೇ ನಾನಿಂದು ಸ್ಥಾನ ಪಡೆಯುವಂತಾಗಿದೆ. ಹಾಗೆಯೇ ನನಗೆ ಈ ಅವಕಾಶ ಲಭಿಸಲು ವಿಶ್ವವಿದ್ಯಾಲಯದ ಮಾರ್ಗದರ್ಶಕರು, ಮೇಲ್ವಿಚಾರಕರೂ ಸಹಕರಿಸಿದ್ದಾರೆ. ಅವರೆಲ್ಲರಿಗೂ ತಾನು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.
ಅವರು ನವದೆಹಲಿಯ ದೀನ ದಯಾಳ್ ಉಪಾಧ್ಯಾಯ ಕಾಲೇಜಿನಲ್ಲಿ ಇತಿಹಾಸದಲ್ಲಿ ಡಿಯು ಪದವಿ ಪಡೆದಿದ್ದಾರೆ. ಪ್ರಸ್ತುತ ನವದೆಹಲಿಯ ಜೆಎನ್ಯುನಲ್ಲಿ ಮಾಸ್ಟರ್ಸ್ ಮತ್ತು ಎಂ.ಫಿಲ್ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆಕ್ಸ್ಫರ್ಡ್ ವಿವಿ ಗೆ ಪಿ.ಎಚ್ಡಿ ಪಡೆಯಲು ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿರುವ ಅವರು ಈ ಆಗಸ್ಟ್ನಲ್ಲಿ ಅದರ ಫಲಿತಾಂಶ ಬಂದಿದೆ. ಇದರಲ್ಲಿ ತನಗೂ ಅವಕಾಶ ದೊರೆತಿದೆ ಎಂದು ಹೇಳಿದ್ದಾರೆ. ಅರ್ಜಿ ಸಲ್ಲಿಸುವ ವೇಳೆ ಅವರು ಆ ವರೆಗೆ ನಡೆಸಿದ್ದ ಅಧ್ಯಯನ ಪ್ರಬಂಧಗಳು, ಸಿ.ವಿ., ಶೈಕ್ಷಣಿಕ ವೃತ್ತಿಪರರಿಂದ ಲೆಟರ್ಗಳನ್ನು ಪಡೆದು ದಾಖಲೆಗಳನ್ನು ಸಲ್ಲಿಸಿದ್ದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಈ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ತನಗೆ ಹೆಮ್ಮೆ ಇದೆ ಎಂದು ಶೀತಲ್ ಹೇಳಿದ್ದಾರೆ.
ಇನ್ನು ಅವರ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶೀತಲ್ ಅವರ ತಂದೆ ಜಯಪ್ರಕಾಶ್ ಜೈನ್, ಅವಳ ಸಾಧನೆ ನಮಗೆ ಖುಷಿ ಕೊಟ್ಟಿದೆ. ಅವಳು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ನಂಬಿಕೆಯೂ ನನಗಿದೆ. ಅಂತಹ ಪ್ರಾಮಾಣಿಕತೆ ಅವಳಲ್ಲಿದೆ. ಅವಳು ಆಕ್ಸ್ಫರ್ಡ್ ವಿವಿ ಅಲ್ಲಿ ಶಿಕ್ಷಣ ಪಡೆಯುವ ನಮ್ಮ ಕನಸು ಸಾಕಾರಗೊಂಡಿದೆ. ಶಿಕ್ಷಣದ ಬಳಿಕ ಆಕೆ ಮಹಿಳಾ ಸಬಲೀಕರಣಕ್ಕೆ ಕೆಲಸ ಮಾಡುತ್ತಾಳೆ ಎಂದು ತಿಳಿಸಿದ್ದಾರೆ.
ಮಗಳ ಸಾಧನೆಯ ಬಗ್ಗೆ ತಾಯಿ ಕಾಂತಾದೇವಿ ಜೈನ್ ಅವರು ಸಂತಸ ಹಂಚಿಕೊಂಡಿದ್ದು, ಮಗಳಿಗೆ ಆಕ್ಸ್ಫರ್ಡ್ನಲ್ಲಿ ಸ್ಥಾನ ಸಿಕ್ಕಿರುವುದು ನಮ್ಮ ಇಡೀ ಹಳ್ಳಿಗೆಯೇ ಹೆಮ್ಮೆಯ ವಿಚಾರ. ದಿನಕ್ಕೆ ಹತ್ತು ಗಂಟೆಗಳಿಗೂ ಹೆಚ್ಚು ಮಗಳು ಅಧ್ಯಯನಕ್ಕೆ ಮೀಸಲಿಟ್ಟಿದ್ದಳು. ಅವಳ ಪರಿಶ್ರಮಕ್ಕೆ ಫಲ ದೊರೆತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.