ನವದೆಹಲಿ: ದೇಶದ ದೂರದ ಮತ್ತು ಪ್ರಾದೇಶಿಕ ಪ್ರದೇಶಗಳಿಗೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 4 ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ – ಉಡೆ ದೇಶ್ ಕಾ ಆಮ್ ನಾಗರಿಕ್ (ಉಡಾನ್) ಅಡಿಯಲ್ಲಿ 78 ಹೊಸ ಮಾರ್ಗಗಳನ್ನು ಸರ್ಕಾರ ಅನುಮೋದಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಹೊಸ ಮಾರ್ಗಗಳ ಅನುಮೋದನೆ ಪ್ರಕ್ರಿಯೆಯಲ್ಲಿ ಈಶಾನ್ಯ ಪ್ರದೇಶ, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳಿಗೆ ಆದ್ಯತೆ ನೀಡಲಾಗಿದೆ. ಅನುಮೋದಿತ ಮಾರ್ಗಗಳ ಪಟ್ಟಿಯಲ್ಲಿ 29 ಚಾಲ್ತಿಯಲ್ಲಿರುವ ವಿಮಾನ ನಿಲ್ದಾಣಗಳು, ಬಳಕೆಯಲ್ಲಿ ಇಲ್ಲದ ಎಂಟು ವಿಮಾನ ನಿಲ್ದಾಣಗಳು(ಎರಡು ಹೆಲಿಪೋರ್ಟ್ಗಳು, ಒಂದು ವಾಟರ್ ಏರೋಡ್ರೋಮ್) ಸೇರಿಕೊಂಡಿವೆ ಎಂದು ಅದು ಹೇಳಿದೆ.
ಉಡಾನ್ ಯೋಜನೆಯಡಿ ಒಟ್ಟಾರೆ 766 ಮಾರ್ಗಗಳನ್ನು ಇದುವರೆಗೆ ಮಂಜೂರು ಮಾಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧೀ ಮಾತನಾಡಿ, “ಈಶಾನ್ಯ ಪ್ರದೇಶಗಳು, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳ ಮೇಲೆ ವಿಶೇಷ ಗಮನಹರಿಸಿ ಸಚಿವಾಲಯವು ಕಳೆದ ಡಿಸೆಂಬರ್ನಲ್ಲಿ 4 ನೇ ಸುತ್ತಿನ ಉಡಾನ್ ಅನ್ನು ಪ್ರಾರಂಭಿಸಿತ್ತು. ಉಡಾನ್ – 4 ರ ಅಡಿಯಲ್ಲಿ ಈ 78 ಮಾರ್ಗಗಳನ್ನು ನೀಡುವುದು ಕೇಂದ್ರ ಸರ್ಕಾರದ ಆಕ್ಟ್ ಈಸ್ಟ್ ಪಾಲಿಸಿಗೆ ಅನುಗುಣವಾಗಿದೆ ಎಂದು ಅವರು ಹೇಳಿದರು.
ಉಡಾನ್ 4 ರ ಅಡಿಯಲ್ಲಿ, ಹೆಲಿಕಾಪ್ಟರ್ ಮತ್ತು ಸೀ ಪ್ಲೇನ್ಗಳ ಕಾರ್ಯಾಚರಣೆಯನ್ನು ಸಹ ಸಂಯೋಜಿಸಲಾಗಿದೆ. 45 ವಿಮಾನ ನಿಲ್ದಾಣಗಳು ಮತ್ತು ಮೂರು ಹೆಲಿಪೋರ್ಟ್ಗಳನ್ನು ಸಂಪರ್ಕಿಸಿರುವ 274 ಉಡಾನ್ ಮಾರ್ಗಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.