ನವದೆಹಲಿ: ಭಾರತ-ಪಾಕಿಸ್ಥಾನ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಮೂಲಸೌಕರ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಗಡಿ ಪ್ರದೇಶದ ಜನರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕೂಡ ಸರ್ಕಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕೇರನ್ ನಂತರ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ 24 ಗಂಟೆಗಳ ವಿದ್ಯುತ್ ಸರಬರಾಜು ಪಡೆದ ಗ್ರಾಮವಾಗಿ ಕುಪ್ವಾರಾ ಜಿಲ್ಲೆಯ ಮಾಚಿಲ್ ವಲಯ ಹೊರಹೊಮ್ಮಿದೆ.
“ಸ್ವಾತಂತ್ರ್ಯ ದಿನಾಚರಣೆಯಂದು ಕೇರನ್ಗೆ ವಿದ್ಯುತ್ ಸಿಕ್ಕಿತು ಮತ್ತು ಈಗ ಎರಡನೇ ಹಂತದಲ್ಲಿ ವಿದ್ಯುತ್ ಮಚಿಲ್ ವಲಯದ ಹಳ್ಳಿಗಳಿಗೂ ತಲುಪಿದೆ. ಶೀಘ್ರದಲ್ಲೇ, ಉಳಿದ ಕಷ್ಟದ ಪ್ರದೇಶಗಳಿಗೂ ನಾವು ವಿದ್ಯುತ್ ಒದಗಿಸಲಿದ್ದೇವೆ” ಎಂದು ಜಮ್ಮು-ಕಾಶ್ಮೀರದ ವಿದ್ಯುತ್ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.
ಮುಂದಿನ ವರ್ಷದ ವೇಳೆಗೆ ಎಲ್ಲಾ ಗಡಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ, ಮಚಿಲ್ ವಲಯದ 20 ಹಳ್ಳಿಗಳಿಗೆ ಡೀಸೆಲ್ ಜನರೇಟರ್ (ಡಿಜಿ) ಸೆಟ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿತ್ತು. ಆದರೆ ಈಗ ಅವು ವಿದ್ಯುತ್ ಗ್ರಿಡ್ ಆಧಾರಿತ ವಿದ್ಯುತ್ ಪಡೆಯುತ್ತಿವೆ.
“ನಾವು ಒಂಬತ್ತು ಹಳ್ಳಿಗಳಿಗೆ ವಿದ್ಯುತ್ ಒದಗಿಸುವ ಮೂಲಕ ಕಾರ್ಯ ಪ್ರಾರಂಭಿಸಿದ್ದೇವೆ ಆದರೆ ಮುಂದಿನ 20 ದಿನಗಳಲ್ಲಿ ಉಳಿದ ಎಲ್ಲಾ ಗ್ರಾಮಗಳು ಗ್ರಿಡ್ ಮೂಲಕ 24×7 ವಿದ್ಯುತ್ ಪಡೆಯಲಿವೆ” ಎಂದು ಕುಪ್ವಾರಾ ಜಿಲ್ಲಾಧಿಕಾರಿ ಅನ್ಶುಲ್ ಗರ್ಗ್ ತಿಳಿಸಿದ್ದಾರೆ. ಇದರಿಂದ ಈ ವಲಯದ ಸುಮಾರು 25 ಸಾವಿರ ಜನರು ಪ್ರಯೋಜನ ಪಡೆಯಲಿದ್ದಾರೆ.
Grid connected power for Macchil area on #LOC in #AspirationalDistrict #kupwara for first time ever; 2nd milestone in a month after Keran area; New era of development begins for over 25,000 people in 9 Panchayats that received only 3 hour power daily through DG sets; @NITIAayog pic.twitter.com/se1WdVyPWs
— Anshul Garg (@hello_anshul) August 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.