ಬೆಂಗಳೂರು: ಕೊರೋನಾ ಸೋಂಕು ಹರಡುವ ವೈರಸ್ಗಳು ಮನುಷ್ಯನ ದೇಹ ಸೇರದಂತೆ ಎಚ್ಚರ ವಹಿಸುವಲ್ಲಿ ಎನ್-95 ಮಾಸ್ಕ್ಗಳು ಹೆಚ್ಚು ಪರಿಣಾಮಕಾರಿ ಎಂದು ಇಸ್ರೋ ಮತ್ತು ಜಯದೇವ ಸಂಸ್ಥೆಗಳ ಸಂಶೋಧಕರ ತಂಡ ನಡೆಸಿದ ಸಂಶೋಧನೆ ದೃಢಪಡಿಸಿದೆ.
ಇಸ್ರೋ ಸಂಸ್ಥೆಯ ಪದ್ಮನಾಭ ಪ್ರಸನ್ನ ಸಿಂಹ ಮತ್ತು ರಾಜ್ಯದ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕ್ಯಾಲರ್ ಸೈನ್ಸಸ್ ಆ್ಯಂಡ್ ರಿಸರ್ಚ್ನ ಪ್ರಸನ್ನ ಸಿಂಹ ಮೋಹನ ರಾವ್ ಅವರು ಈ ಸಂಶೋಧನೆಯನ್ನು ನಡೆಸಿದ್ದು, ಈ ಸಂಶೋಧನೆಯಲ್ಲಿ ಕೊರೋನಾ ತಡೆಗೆ ಎನ್ 95 ಮಾಸ್ಕ್ ಹೇಗೆ ಪೂರಕವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವರದಿಯನ್ನು ನೀಡಿದ್ದಾರೆ. ಈ ವರದಿಯನ್ನು ಫಿಸಿಕ್ಸ್ ಆಫ್ ಫ್ಲ್ಯೂಡ್ಸ್ ಎಂಬ ವಿಜ್ಞಾನ ಪತ್ರಿಕೆ ಪ್ರಕಟಿಸಿದೆ.
ವ್ಯಕ್ತಿಯೊಬ್ಬ ಕೆಮ್ಮಿದಾಗ ಅಥವಾ ಸೀನಿದಂತಹ ಸಂದರ್ಭದಲ್ಲಿ ಆತನ ದೇಹದಲ್ಲಿರುವ ವೈರಾಣುಗಳು 3 ಮಿ. ದೂರದ ವರೆಗೆ ವ್ಯಾಪಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಎನ್ 95 ಮಾಸ್ಕ್ ಬಳಕೆ ಇದನ್ನು 0.1-0.5 ರ ವರೆಗೆ ಸೀಮಿತಗೊಳಿಸುತ್ತದೆ. ಈ ಮಾಸ್ಕ್ಗಳ ಬಳಕೆಯಿಂದ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವ ತೀವ್ರತೆ ಕಡಿಮೆಯಾದರೆ, ಆರೋಗ್ಯವಂತ ವ್ಯಕ್ತಿಗೆ ತನ್ನ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಉಳಿಸಿಕೊಳ್ಳುವುದಕ್ಕೂ ಇದು ಪೂರಕವಾಗಲಿದೆ.
ಪ್ರಸ್ತುತ ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳು ಈ ಮಾಸ್ಕ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕೆಮ್ಮಿನ ಚಲನೆಗಳ ಅಧ್ಯಯನದ ಮೂಲಕ ಈ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು, ಎನ್ 95 ಮಾಸ್ಕ್ ಪರಿಣಾಮಕಾರಿಯಾಗಿ ಫಲಿತಾಂಶ ನೀಡುವುದಾಗಿ ಸಂಶೋಧನಾ ವರದಿಗಳ ಮೂಲಕವೇ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.