
ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಬಹುಜನ ಪ್ರಿಯ ಫೇಸ್ಬುಕ್ ಸೆಪ್ಟೆಂಬರ್ ತಿಂಗಳಿನಿಂದ ತೊಡಗಿದಂತೆ ಹೊಸ ವಿನ್ಯಾಸದ ಮೂಲಕ ಕಾರ್ಯನಿರ್ವಹಿಸಲಿದೆ. ಈ ವರೆಗಿನ ಕ್ಲಾಸಿಕ್ ವಿನ್ಯಾಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಈಗಾಗಲೇ ಹೊಸ ವಿನ್ಯಾಸವನ್ನು ಪರಿಚಯಿಸಿದೆ.
ಡೆಸ್ಕ್ಟಾಪ್, ಮೊಬೈಲ್ಗಳಲ್ಲಿಯೂ ಫೇಸ್ಬುಕ್ ಬಳಕೆದಾರರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಪ್ಗ್ರೇಡೆಡ್ ವರ್ಶನ್ ಅನ್ನು ಪರಿಚಯಿಸಲು ಸಂಸ್ಥೆ ಉತ್ಸುಕತೆ ತೋರಿದೆ. ಹಳೆಯ ವರ್ಶನ್ನಲ್ಲಿದ್ದ ಕೆಲವು ಲಕ್ಷಣಗಳನ್ನು ಒಳಗೊಂಡಂತೆ ಈ ಅಪ್ಗ್ರೇಡೆಡ್ ವರ್ಶನ್ ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಫೇಸ್ಬುಕ್ ಒಲವು ತೋರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ, ಹೊಸ ಲಕ್ಷಣಗಳ ಜೊತೆಗೆ ಬಳಕೆದಾರರಿಗೆ ಮತ್ತಷ್ಟು ಹೊಸತನವನ್ನು ನೀಡಲು ಫೇಸ್ಬುಕ್ ಉದ್ದೇಶಿಸಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.
ಹೊಸ ವಿನ್ಯಾಸದಲ್ಲಿ ಡಾರ್ಕ್ ಥೀಮ್ ಆಯ್ಕೆ, ನೀಲಿ ಬಣ್ಣದ ಥೀಮ್ , ಮಾರ್ಕೆಟ್ ಪ್ಲೇಸ್, ಗೇಮಿಂಗ್ ಐಕಾನ್, ಯುಐ, ಎಫ್ಬಿ ವಾಚ್, ಸೆಟ್ಟಿಂಗ್ ಕೀ ಸೇರಿದಂತೆ ಇನ್ನಿತರ ಅಂಶಗಳಲ್ಲಿಯೂ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಹೊಸ ವರ್ಶನ್ ಅನ್ನು ಎಫ್ 8 ಡೆವಲಪರ್ಸ್ ಅಭಿವೃದ್ಧಿ ಮಾಡಿರುವುದಾಗಿಯೂ ಫೇಸ್ಬುಕ್ ಸಂಸ್ಥೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



