ನವದೆಹಲಿ: ದೇಶದಲ್ಲಿ ಕೊರೋನಾ ಪರೀಕ್ಷೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದೇ ವೇಳೆ ಸೋಂಕು ಹರಡುವ ತೀವ್ರತೆಯ ಪ್ರಮಾಣ ಕಡಿಮೆಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ದಿನಕ್ಕೆ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 6,423 ರಷ್ಟು ಕಡಿಮೆಯಾಗಿರುವುದಾಗಿ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೆ ವಯಸ್ಸು ಮತ್ತು ಲಿಂಗಾನುಪಾತದ ಆಧಾರದಲ್ಲಿ ಕೊರೋನಾದಿಂದಾಗಿ ಸಂಭವಿಸುತ್ತಿರುವ ಸಾವಿನ ಪ್ರಮಾಣವನ್ನೂ ವಿಶ್ಲೇಷಣೆ ಮಾಡಿರುವ ಸಚಿವಾಲಯ, ಪುರುಷರ ಪ್ರಮಾಣ 69% ಮತ್ತು ಮಹಿಳೆಯರಲ್ಲಿ 31% ಗಳಷ್ಟು ಸಾವು ಸಂಭವಿಸುತ್ತಿರುವುದಾಗಿಯೂ ತಿಳಿಸಿದೆ.
ಕೊರೋನಾ ಭಾರತಕ್ಕೆ ಬಂದ ಆರಂಭದ ದಿನಗಳಲ್ಲಿ ಪ್ರತಿ 10 ಲಕ್ಷ ಜನರಲ್ಲಿ 363 ಜನರಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಸೋಂಕು ವ್ಯಾಪಿಸುವ ಪ್ರಮಾಣದಲ್ಲಿ ಏರಿಕೆ ಕಂಡುಬಂದಂತೆ 10 ಲಕ್ಷ ಜನರಲ್ಲಿ 600 ಕ್ಕೂ ಅಧಿಕ ಜನರಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವರೆಗೆ ದೇಶದಲ್ಲಿ 3.7 ಕೋಟಿಗೂ ಅಧಿಕ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿರುವುದಾಗಿ ಸಚಿವಾಲಯ ವರದಿಯಲ್ಲಿ ಹೇಳಿದೆ.
ಇನ್ನು ಸಾವಿಗೆ ಸಂಬಂಧಿಸಿದಂತೆ ಪ್ರಮಾಣವನ್ನು ವರದಿಯಲ್ಲಿ ತಿಳಿಸಿದ್ದು 60 ವರ್ಷ ಮೇಲ್ಪಟ್ಟ ಸೋಂಕಿತರಲ್ಲಿ 51%, 45-60 ವರ್ಷದವರಲ್ಲಿ 36%, 26-44 ವರ್ಷದ ಸೋಂಕಿತರಲ್ಲಿ 11%, 18-25 ವರ್ಷದವರಲ್ಲಿ ಮತ್ತು 17 ವರ್ಷಕ್ಕಿಂತ ಕೆಳಗಿನ ಸೋಂಕಿತರ ಸಾವಿನ ಪ್ರಮಾಣ 1% ರಷ್ಟಿರುವುದಾಗಿಯೂ ಸಚಿವಾಲಯ ವರದಿ ನೀಡಿದೆ. ಕಳೆದ ಏಳು ದಿನಗಳಿಗೆ ಸಂಬಂಧಿಸಿದಂತೆ 11% ರಷ್ಟಿದ್ದ ಸೋಂಕಿನ ಪ್ರಮಾಣ 8% ಗೆ ಇಳಿಕೆಯಾಗಿರುವುದಾಗಿಯೂ ಸಚಿವಾಲಯ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.