
ನ್ಯೂಯಾರ್ಕ್: ಅಮೆರಿಕದ ಶ್ವೇತಭವನದಲ್ಲಿ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕದ ಪೌರತ್ವದ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾತಿ ಧರ್ಮ ಮತ್ತು ವರ್ಣಗಳ ನ್ನೊಳಗೊಂಡ ವಿಶಾಲವಾದ ವೈವಿಧ್ಯಮಯ ರಾಷ್ಟ್ರಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸುತ್ತಿದ್ದೇವೆ ಎಂದಿದ್ದಾರೆ.
ಸುಧಾ ಸುಂದರಿ ನಾರಾಯಣ್ ಎಂಬ ಭಾರತ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಈ ಕಾರ್ಯಕ್ರಮದಲ್ಲಿ ಅಮೆರಿಕದ ಪೌರತ್ವವನ್ನು ಸ್ವೀಕಾರ ಮಾಡಿದರು. ಬೊಲಿವಿಯಾ, ಲೆಬನಾನ್, ಸುಡಾನ್ ಮತ್ತು ಗಾನ ದೇಶದ ಪ್ರಜೆಗಳು ಕೂಡ ಈ ಸಂದರ್ಭದಲ್ಲಿ ಪೌರತ್ವದ ಪ್ರಮಾಣವಚನ ಸ್ವೀಕರಿಸಿದರು.
13 ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದ, ಭಾರತದಲ್ಲಿ ಜನಿಸಿದ ನಾರಾಯಣನ್ ಅದ್ಭುತ ಯಶಸ್ಸು ಕಂಡವರು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಗೃಹ ಇಲಾಖೆಯ ಕಾರ್ಯದರ್ಶಿ ಚಾದ್ ವುಲ್ಫ್ ಅವರು ಇವರುಗಳಿಗೆ ಅಮೆರಿಕದ ರಾಷ್ಟ್ರಧ್ವಜ ನೀಡಿ ಪ್ರಮಾಣವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಡಿಯೋವನ್ನು ರಿಪಬ್ಲಿಕನ್ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



