ನವದೆಹಲಿ: ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಸಮೀಪದಲ್ಲಿ ಚೀನಾದ ಹೆಲಿಕಾಪ್ಟರ್ಗಳು ಚಟುವಟಿಕೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಪಡೆಗಳು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿವೆ. ಶೋಲ್ಡರ್ ಫೈಯರ್ಡ್ (ಭುಜದಲ್ಲಿ ಹಿಡಿದು ಹಾರಿಸಬಲ್ಲ) ವಾಯು ರಕ್ಷಣಾ ಕ್ಷಿಪಣಿಗಳಿಂದ ಸಜ್ಜಿತರಾದ ಸೈನಿಕರನ್ನು ಅಲ್ಲಿ ಭಾರತೀಯ ಸೇನೆ ನಿಯೋಜಿಸಿದೆ.
“ರಷ್ಯಾದ ಮೂಲದ ಇಗ್ಲಾ ವಾಯು ರಕ್ಷಣಾ ವ್ಯವಸ್ಥೆಯಿಂದ ಶಸ್ತ್ರಸಜ್ಜಿತವಾದ ಭಾರತೀಯ ಪಡೆಗಳನ್ನು ಗಡಿಯುದ್ದಕ್ಕೂ ನಿರ್ಣಾಯಕ ಎತ್ತರದಲ್ಲಿ ನಿಯೋಜಿಸಲಾಗಿದ್ದು, ಅಲ್ಲಿನ ಭಾರತೀಯ ವಾಯು ಜಾಗವನ್ನು ಉಲ್ಲಂಘಿಸಲು ಪ್ರಯತ್ನಿಸುವ ಯಾವುದೇ ಶತ್ರು ವಿಮಾನಗಳನ್ನು ಹೊಡೆದುರುಳಿಸಬಹುದು” ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಮೂಲದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೂ ಸೇನೆ ಮತ್ತು ವಾಯುಪಡೆ ಎರಡೂ ಬಳಸುತ್ತವೆ ಮತ್ತು ಶತ್ರು ಫೈಟರ್ ಜೆಟ್ಗಳು ಅಥವಾ ಚಾಪರ್ಗಳು ಸಮೀಪಕ್ಕೆ ಬಂದಾಗ ಅಥವಾ ಯುದ್ಧದ ಸಮಯದಲ್ಲಿ ಇವುಗಳನ್ನು ನಿಯೋಜಿಸಿ ಬಳಸಲಾಗುತ್ತದೆ.
ಭಾರತವು ಗಡಿಯುದ್ದಕ್ಕೂ ರಾಡಾರ್ ಮತ್ತು ಸರ್ಫೇಸ್ ಏರ್ ಮಿಸೈಲ್ ಸಿಸ್ಟಮ್ ಅನ್ನು ನಿಯೋಜಿಸುವ ಮೂಲಕ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಿದೆ ಮತ್ತು ಶತ್ರುವಿನ ಚಲನವಲನಗಳ ಮೇಲೆ ಸೂಕ್ಷ್ಮ ನಿಗಾ ಇಟ್ಟಿದೆ. ಪೂರ್ವ ಲಡಾಖ್ ವಲಯದಲ್ಲಿ ಚೀನಾ ಹೆಲಿಕಾಪ್ಟರ್ಗಳ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಭಾರತವು ವಾಯು ರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. Su-30 MKI ಯುದ್ಧವಿಮಾನವನ್ನು ಮೇ ತಿಂಗಳ ಮೊದಲ ವಾರದಲ್ಲೇ ಭಾರತವು ಗಡಿಯಲ್ಲಿ ನಿಯೋಜನೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.