ನವದೆಹಲಿ: ಭಾರತ ಮತ್ತು ರಷ್ಯಾದ ಜಂಟಿ ಪ್ರಯತ್ನವಾದ ಬ್ರಹ್ಮೋಸ್ ಕ್ಷಿಪಣಿಯನ್ನು ಅನ್ನು ಸ್ನೇಹಪರ ರಾಷ್ಟ್ರಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆಯನ್ನು ನಡೆಸಲಾಗಿದೆ. ರಫ್ತು ಮಾಡಬಹುದಾದ ಮಿಲಿಟರಿ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ರಕ್ಷಣಾ ಸಚಿವಾಲಯವು ತೊಡಗಿದೆ. ಈ ವಸ್ತುಗಳ ಪಟ್ಟಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಕೂಡ ಇದೆ.
“ಭಾರತೀಯ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಿದ ನಂತರ, ಬ್ರಹ್ಮೋಸ್ ಕ್ಷಿಪಣಿಯನ್ನು ಮೂರನೇ ದೇಶಗಳಿಗೆ ರಫ್ತು ಮಾಡಲು ಭಾರತ ಸರ್ಕಾರ ಸಿದ್ಧವಾಗಿದೆ” ಎಂದು ಮೂಲಗಳು ವರದಿ ಮಾಡಿವೆ.
ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಬ್ರಹ್ಮೋಸ್ ಕ್ಷಿಪಣಿ ಜಾಗತಿಕವಾಗಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ ಮತ್ತು ಎರಡೂ ದೇಶಗಳ ಎರಡೂ ಸರ್ಕಾರಗಳು ಈ ಸೂಪರ್ಸಾನಿಕ್ ಕ್ಷಿಪಣಿಯನ್ನು ಇತರ ದೇಶಗಳಿಗೆ ರಫ್ತು ಮಾಡಲು ಸಿದ್ಧವಾಗಿವೆ.
ಈ ಕ್ಷಿಪಣಿ ದಕ್ಷಿಣ ಅಮೆರಿಕಾದಿಂದ ಆಸಿಯಾನ್ ರಾಷ್ಟ್ರಗಳವರೆಗೆ ಮತ್ತು ಪೂರ್ವ ಯುರೋಪಿಯನ್ ರಾಷ್ಟ್ರಗಳ ಗಮನವನ್ನು ಕೂಡ ಸೆಳೆದಿದೆ. ಈ ದೇಶಗಳು ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾಗಿರುವ ಬ್ರಹ್ಮೋಸ್ ಅನ್ನು ಖರೀದಿಸಲು ಉತ್ಸುಕರಾಗಿದ್ದಾರೆ.
ಬ್ರೆಜಿಲ್, ಚಿಲಿ, ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಅಲ್ಜೀರಿಯಾ, ಗ್ರೀಸ್, ದಕ್ಷಿಣ ಆಫ್ರಿಕಾ, ಮಲೇಷ್ಯಾ, ಥೈಲ್ಯಾಂಡ್, ಈಜಿಪ್ಟ್, ಸಿಂಗಾಪುರ್, ಮತ್ತು ಬಲ್ಗೇರಿಯಾ ಸೇರಿದಂತೆ ಹಲವಾರು ದೇಶಗಳು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದು, ಚರ್ಚೆಗಳು ಮುಂದಿನ ಹಂತಕ್ಕೆ ಸಾಗಿವೆ ಎಂದು ಹೇಳಲಾಗಿದೆ.
ಯುಎಇ ಕೂಡ ಈ ಕ್ಷಿಪಣಿಯನ್ನು ಖರೀದಿಸಲು ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದೆ, ಆದರೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ವರದಿಗಳ ಪ್ರಕಾರ, “ಯುಎಇ ಭಾರತ ಮತ್ತು ರಷ್ಯಾ ಎರಡರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದೆ. ಕ್ಷಿಪಣಿಯನ್ನು ಆ ದೇಶಕ್ಕೆ ರಫ್ತು ಮಾಡಿದರೆ ಯಾವುದೇ ತೊಂದರೆಗಳಿಲ್ಲ” ಎನ್ನಲಾಗಿದೆ
ವಿಯೆಟ್ನಾಂ ಮತ್ತು ಇಂಡೋನೇಷ್ಯಾದೊಂದಿಗೂ ಕೂಡ ಮಾತುಕತೆಗಳು ಮುಂದುವರಿದ ಹಂತದಲ್ಲಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.