ನವದೆಹಲಿ: 2019ರಲ್ಲಿ ಪುಲ್ವಾಮಾದಲ್ಲಿ ನಡೆದಿದ್ದ ಸೇನಾ ವಾಹನಗಳ ಮೇಲಿನ ಉಗ್ರ ದಾಳಿಯ ಸಂಬಂಧ ರಾಷ್ಟ್ರೀಯ ತನಿಖಾ ದಳವು ಇಂದು ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಈ ಪಟ್ಟಿಯಲ್ಲಿ ಜೈಶ್-ಇ- ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಆತನ ಸಹೋದರ ಅಬ್ದುಲ್ ರವೂಫ್ ಅಸ್ಗರ್, ಆತ್ಮಾಹುತಿ ಬಾಂಬಾ ದಾಳಿ ನಡೆಸಿದ ಆದಿಲ್ ಅಹಮದ್ ದಾರ್, ಮೃತ ಉಗ್ರಗಾಮಿ ಮಹಮ್ಮದ್ ಉಮರ್ ಫರೂಕ್ ಸೇರಿದಂತೆ ಇನ್ನೂ ಹಲವು ಪಾಕಿಸ್ಥಾನ ಪ್ರೇರಿತ ಉಗ್ರಗಾಮಿ ಸಂಘಟನೆಗಳ ಸದಸ್ಯ ಉಗ್ರರ ಹೆಸರುಗಳನ್ನು ಈ ಆರೋಪ ಪಟ್ಟಿಯಲ್ಲಿ ರಾಷ್ಟ್ರೀಯ ತನಿಖಾ ತಂಡ ಉಲ್ಲೇಖಿಸಿದೆ.
ಈ ವಿಸ್ತೃತ ಮಾಹಿತಿಯ ಆರೋಪ ಪಟ್ಟಿಯನ್ನು ಎನ್ಐಎ ಈಗಾಗಲೇ ಜಮ್ಮು ಕಾಶ್ಮೀರದ ಎನ್ಐಎ ವಿಶೇಷ ನ್ಯಾಯಾಲಯಕ್ಕೂ ಸಲ್ಲಿಸಿದೆ. ಈ ಪಟ್ಟಿಯಲ್ಲಿ ಈಗಾಗಲೇ ಬಂಧನಕ್ಕೆ ಒಳಪಟ್ಟಿರುವ ಉಗ್ರಗಾಮಿಗಳ ಹೆಸರನ್ನು ನಮೂದು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪಟ್ಟಿ ಸುಮಾರು 5000 ಪುಟಗಳಷ್ಟಿದ್ದು, ಇದರಲ್ಲಿ ಪುಲ್ವಾಮಾ ಕಾರ್ ಬಾಂಬ್ ಸ್ಪೋಟಿಸಿ ಯೋಧರನ್ನು ಬಲಿ ಪಡೆದ ಘಟನೆಯ ಸಂಪೂರ್ಣ ಮಾಹಿತಿ ಇರುವುದಾಗಿಯೂ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.