ಲಂಡನ್: ಹೈದರಾಬಾದಿನ 20 ವರ್ಷದ ನೀಲಕಂಠ ಭಾನು ಪ್ರಕಾಶ್ ಎಂಬುವವರು ಲಂಡನ್ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಗೇಮ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಗಣಿತ ವಿದ್ಯಾರ್ಥಿಯಾಗಿರುವ ಅವರು ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ, ಮಾನಸಿಕ ಲೆಕ್ಕಾಚಾರದಲ್ಲಿ ವಿಶ್ವ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ರಿಟನ್, ಜರ್ಮನಿ, ಲೆಬನಾನ್ ಸೇರಿದಂತೆ 13 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.
ನೀಲಕಂಠ್ ಅವರು ತಮ್ಮ 5 ನೇ ವಯಸ್ಸಿನಲ್ಲಿ ಎಸ್ಐಪಿ ಅಬಾಕಸ್ ತರಗತಿಗೆ ಸೇರಿಕೊಂಡಿದ್ದರು ಹಾಗೂ ಅಲ್ಲಿ ನೀಡುವ ಗ್ರ್ಯಾಂಡ್ ಮಾಸ್ಟರ್ನ ಒಂಬತ್ತು ಹಂತಗಳನ್ನು ಪೂರ್ಣಗೊಳಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಬಾಕಸ್ ಚಾಂಪಿಯನ್ 13 ಹಾಗೂ ರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಸರಣಿ 11 ಮತ್ತು 12 ರೆ ವಿಜೇತರಾಗಿದ್ದರು.
ನಾನು ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ ಎಂಬ ಕಾರಣಕ್ಕಾಗಿ 4 ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದೇನೆ. ನನ್ನ ಮೆದುಳು ಕ್ಯಾಲ್ಕ್ಯುಲೇಟರ್ನ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ಸ್ಕಾಟ್ ಫ್ಲಾನ್ಸ್ಬರ್ಗ್ ಮತ್ತು ಶಕುಂತಲಾ ದೇವಿಯಂತಹ ಗಣಿತ ದಿಗ್ಗಜರು ಹೊಂದಿದ್ದ ದಾಖಲೆಗಳನ್ನು ಮುರಿಯುವುದು ನನಗೆ ನಿಜಕ್ಕೂ ಹೆಮ್ಮೆಯಾಗಿದೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವೂ ಹೌದು. ಭಾರತವನ್ನು ಗಣಿತದ ಜಾಗತಿಕ ಮಟ್ಟದಲ್ಲಿ ಇರಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ ”ಎಂದು ಭಾನು ಪ್ರಕಾಶ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.