ನವದೆಹಲಿ: ವೃತ್ತಿ ಆಧಾರಿತ ಮಾಹಿತಿಗಳನ್ನು ನೀಡುವ ಸಲುವಾಗಿ ಭಾರತೀಯ ವಾಯು ಸೇನೆಯ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ ಅವರು ‘ಮೈ ಐಎಎಫ್’ ಎಂಬ ಮೊಬೈಲ್ ಆ್ಯಪ್ಗೆ ಐಎಎಫ್ನ ಪ್ರಧಾನ ಕಛೇರಿ ವಾಯು ಭವನದಲ್ಲಿ ಚಾಲನೆ ನೀಡಿದರು.
ಡಿಜಿಟಲ್ ಇಂಡಿಯಾ ಉಪಕ್ರಮದ ಅಂಗವಾಗಿ ಆರಂಭ ಮಾಡಲಾಗಿರುವ ಈ ಆ್ಯಪ್ ಮೂಲಕ ವಾಯುಪಡೆಗೆ ಸೇರಲಿಚ್ಛಿಸುವ ಯುವ ಜನರಿಗೆ ವೃತ್ತಿ ಆಧಾರಿತ ಮಾಹಿತಿಗಳನ್ನು, ವಿವರಗಳನ್ನು ಒದಗಿಸಲಾಗುತ್ತದೆ ಎಂದು ಐಎಎಫ್ ತಿಳಿಸಿದೆ. ಈ ಆ್ಯಪ್ ಅನ್ನು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ನ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು ವಾಯುಸೇನೆಯ ವೃತ್ತಿಗೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವಲ್ಲಿ ಸಹಾಯ ಮಾಡಲಿದೆ.
ಈ ಅಪ್ಲಿಕೇಶನ್ ಬಳಕೆದಾರ ಸ್ನೇಹಿಯಾಗಿದ್ದು, ಇದರಲ್ಲಿ ವಾಯು ಪಡೆಯ ಆಯ್ಕೆಯ ವಿಧಾನ, ತರಬೇತಿ ಪಠ್ಯ, ವೇತನ ಮೊದಲಾದವುಗಳನ್ನು ಒಳಗೊಂಡಂತೆ ಮಹತ್ವದ ಮಾಹಿತಿಗಳನ್ನು ನೀಡಲಿದೆ. ಈ ಮೊಬೈಲ್ ಆ್ಯಪ್ ಐಎಎಫ್ನ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವ ನೆಲೆಯ ಏಕೈಕ ಫ್ಲ್ಯಾಟ್ಫಾರ್ಮ್ ಆಗಿರಲಿದೆ ಎಂದೂ ಐಎಎಫ್ ತಿಳಿಸಿದೆ. ಜೊತೆಗೆ ಈ ಆ್ಯಪ್ನಲ್ಲಿ ಭಾರತೀಯ ವಾಯು ಪಡೆಯ ಸಾಹಸಗಾಥೆಗಳ ನೋಟವನ್ನೂ ನೀಡಲಾಗುವುದು ಎಂದು ಐಎಎಫ್ ತಿಳಿಸಿದೆ.
ಈ ಆ್ಯಪ್ ಅನ್ನು ಆಂಡ್ರಾಯ್ಡ್ ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಐಎಎಫ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.