ನ್ಯೂಯಾರ್ಕ್: ಎಡವಟ್ಟು, ಕುತಂತ್ರಗಳಿಗೆ ಕುಖ್ಯಾತವಾಗಿರುವ ಪಾಕಿಸ್ಥಾನ ಮತ್ತೊಂದು ಎಡವಟ್ಟು ಮಾಡಿಕೊಂಡು ವಿಶ್ವದ ಮುಂದೆ ತನ್ನ ಘನತೆಯನ್ನು ಕಳೆದುಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಾಗಿನ ತನ್ನ ಶಾಶ್ವತ ಕಾರ್ಯಾಚರಣೆಯ ಅಧಿಕೃತ ವೆಬ್ಸೈಟ್ನಲ್ಲಿ ನಕಲಿ ಭಾಷಣವನ್ನು ಪೋಸ್ಟ್ ಮಾಡಿದ್ದ ಪ್ರಮಾದ ಮಾಡಿದೆ.
ವರದಿಗಳ ಪ್ರಕಾರ, ಪಾಕಿಸ್ಥಾನವು ಯುಎನ್ಎಸ್ಸಿಯಲ್ಲಿ ತಾನು ಮಾಡಿದ ಭಾಷಣ ಎಂದು ನಕಲಿ ಭಾಷಣವನ್ನು ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ. ಅಸಲಿಗೆ ಭಯೋತ್ಪಾದನೆ ಬಗೆಗಿನ ಅಧಿವೇಶನದಲ್ಲಿ ಅದರ ರಾಯಭಾರಿ ಮಾತನಾಡಿರಲೇ ಇಲ್ಲ.
ಸೋಮವಾರ ಆನ್ಲೈನ್ನಲ್ಲಿ ನಡೆದ ವರ್ಚುವಲ್ ಸಭೆಗಾಗಿ ಪ್ರಕಟವಾದ ಸ್ಪೀಕರ್ಗಳ ಪಟ್ಟಿಯಲ್ಲಿ ಪಾಕಿಸ್ಥಾನ ಇರಲಿಲ್ಲ, ಅಥವಾ ಸಭೆಯ ವಿಡಿಯೋದಲ್ಲಿ ಅದರ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಉಪಸ್ಥಿತಿ ಇರಲೇ ಇಲ್ಲ.
ಯುಎನ್ನಲ್ಲಿ ಭಾರತದ ವಿರುದ್ಧದ ಅಭಿಯಾನಕ್ಕೆ ಬೆಂಬಲವನ್ನು ಸಂಗ್ರಹಿಸಲು ಸಾಧ್ಯವಾಗದ ಇಸ್ಲಾಮಾಬಾದ್ ಭದ್ರತಾ ಮಂಡಳಿಗೆ ಸುಳ್ಳು ದಾಖಲೆಯನ್ನು ಸೃಷ್ಟಿಸಲು ಮುಂದಾಗಿದೆ. ಪಾಕಿಸ್ಥಾನವು ಯುಎನ್ಎಸ್ಸಿ ಸದಸ್ಯನಲ್ಲ ಮತ್ತು ಆದ್ದರಿಂದ ಅದು ಹೇಳಿಕೆ ದಾಖಲಿಸಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.