ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಬಿಹಾರದ ಪಾಟ್ನಾ ಮತ್ತು ಮುಜಾಫರ್ಪುರದಲ್ಲಿ ತಲಾ 500 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಬಲ ನೀಡಿದೆ. ಈ ಆಸ್ಪತ್ರೆಗೆ ಪಿಎಂ-ಕೇರ್ಸ್ ಫಂಡ್ ಟ್ರಸ್ಟ್ ಹಣ ಹಂಚಿಕೆ ಮಾಡಿದೆ.
“ಬಿಹಾರದಲ್ಲಿ ಕೋವಿಡ್ ಆರೈಕೆಯನ್ನು ಸುಧಾರಿಸುವಲ್ಲಿ ಈ ಆಸ್ಪತ್ರೆ ಸಾಕಷ್ಟು ಸಹಾಯ ಮಾಡಲಿದೆ” ಎಂದು ಪಿಎಂಒ ತನ್ನ ಅಧಿಕೃತ ಹ್ಯಾಂಡಲ್ನಿಂದ ಟ್ವೀಟ್ ಮಾಡಿದೆ. ಪಾಟ್ನಾದಲ್ಲಿ 500 ಹಾಸಿಗೆಗಳ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಇನ್ನೊಂದನ್ನು ಮುಜಾಫರ್ಪುರದಲ್ಲಿ ಮುಂದಿನ ದಿನಗಳಲ್ಲಿ ತೆರೆಯಲಾಗುತ್ತದೆ.
ಈ ಆಸ್ಪತ್ರೆಗಳು ವೆಂಟಿಲೇಟರ್ಗಳೊಂದಿಗಿ 125 ಐಸಿಯು ಹಾಸಿಗೆಗಳು ಮತ್ತು ತಲಾ 375 ಸಾಮಾನ್ಯ ಹಾಸಿಗೆಗಳನ್ನು ಹೊಂದಿರುತ್ತವೆ ಎಂದು ಪಿಎಂಒ ಮಾಹಿತಿ ನೀಡಿದೆ. “ಪ್ರತಿ ಹಾಸಿಗೆಗೆ ಆಮ್ಲಜನಕದ ಪೂರೈಕೆಯೂ ಇದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಂದ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲಾಗುವುದು ”ಎಂದು ಪಿಎಂಒ ಟ್ವೀಟ್ ಮಾಡಿದ್ದಾರೆ.
ಈ ಮೊದಲು, ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ವೆಂಟಿಲೇಟರ್ಗಳನ್ನು ಖರೀದಿಸಲು ಮತ್ತು ಭಾರತದ ಲಸಿಕೆ ಅಭಿವೃದ್ಧಿಗೆ ಬೆಂಬಲ ನೀಡಲು ಸರ್ಕಾರವು ಪಿಎಂ-ಕೇರ್ಸ್ ಫಂಡ್ನಿಂದ 3,100 ಕೋಟಿ ರೂಪಾಯಿ ಒದಗಿಸಿತ್ತು. ಆದರೂ, ಅದರ ಬಹುಪಾಲು ಭಾಗವನ್ನು ವೆಂಟಿಲೇಟರ್ಗಳನ್ನು ಸಂಗ್ರಹಿಸಲು ಖರ್ಚು ಮಾಡಲಾಗಿದೆ.
ಇತ್ತೀಚೆಗೆ, ಪಿಎಂ-ಕೇರ್ಸ್ ಫಂಡ್ನಿಂದ ಹಣವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸುವಂತೆ ಕೇಂದ್ರಕ್ಕೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇದು ಪ್ರತಿಪಕ್ಷಗಳಿಗೆ ದೊಡ್ಡ ಮುಖಭಂಗವನ್ನುಂಟು ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.