ಬೆಂಗಳೂರು: ಆ್ಯಪಲ್ನ ಐಫೋನ್ ಎಸ್ಇ (2020) ಮಾದರಿಯ ಸ್ಮಾರ್ಟ್ ಫೋನ್ ಅಸೆಂಬ್ಲಿಂಗ್ ಕಾರ್ಯಕ್ಕೆ ತೈವಾನ್ನ ವಿಸ್ಟ್ರಾನ್ ಕಂಪೆನಿ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಆ ಮೂಲಕ ಹೊಸ ಕ್ರಮದ ಐಫೋನ್ ತಯಾರಿಕೆಗೂ ಭಾರತ ತೆರೆದುಕೊಂಡಂತಾಗಿದೆ.
ಇನ್ನೇನು ಕೆಲವೇ ಸಮಯದಲ್ಲಿ ಭಾರತದ ರಿಟೈಲ್ ಮೊಬೈಲ್ ಅಂಗಡಿಗಳು ಮತ್ತು ಆನ್ಲೈನ್ ಮಾರುಕಟ್ಟೆಯಲ್ಲಿಯೂ ಈ ಆ್ಯಪಲ್ನ ಐಫೋನ್ಗಳು ಗ್ರಾಹಕರ ಕೈ ಸೇರಲಿವೆ. ವಿಶ್ವದ ಎರಡನೇಯ ಬೃಹತ್ ಐಫೋನ್ ಮಾರುಕಟ್ಟೆ ಎಂದೇ ಗುರುತಿಸಿಕೊಂಡಿರುವ ಭಾರತದಲ್ಲಿ ಐಫೋನ್ ಎಸ್ಇ ಮಾದರಿ ತಯಾರಿಗೆ ಚಾಲನೆ ನೀಡುವ ಮೂಲಕ ಆ್ಯಪಲ್ ತನ್ನ ಮಾರುಕಟ್ಟೆ ವಿಸ್ತರಣೆಗೆ ಬೇಕಾದ ಎಲ್ಲಾ ಕೆಲಸಗಳನ್ನೂ ಮಾಡುತ್ತಿದೆ.
ಸದ್ಯ ಆ್ಯಪಲ್ನ ಐಫೋನ್ ಎಸ್ಇ ತಯಾರಿಕೆಯಲ್ಲಿ ವಿಸ್ಟ್ರಾನ್ ಸಹ ಕೈಜೋಡಿಸಿರುವುದು ಐಫೋನ್ನ ಬಿಡಿಭಾಗಗಳ ಆಮದು ತೆರಿಗೆಗಳ ಪಾವತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಆ್ಯಪಲ್ ಕಂಪೆನಿಗೆ ಸಹಕಾರಿಯಾಗಲಿದೆ. ಐಫೋನ್ಗಳ ಆಮದು ತೆರಿಗೆಯಾಗಿ ಕೇಂದ್ರ ಸರ್ಕಾರ 20% ತೆರಿಗೆಯನ್ನು ವಿಧಿಸುತ್ತಿದ್ದು, ಈ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ವಿಸ್ಟ್ರಾನ್ ಆ್ಯಪಲ್ ಕಂಪೆನಿಗೆ ನೆರವಾಗಿದೆ ಎಂದೇ ಹೇಳಬಹುದು.
ಈ ಐಫೋನ್ ಗಳಲ್ಲಿ, ಐಫೋನ್ 11 ಮತ್ತು ಐಫೋನ್11 ಪ್ರೊ ಮ್ಯಾಕ್ಸ್ ಗಳಲು ಬಳಕೆ ಮಾಡಲಾಗಿರುವ ಎ13 ಪ್ರೊಸೆಸರ್ಗಳನ್ನು ಅಳವಡಿಸಲಾಗಿದೆ. ವೈರ್ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಈ ಐಫೋನ್ ಒಳಗೊಂಡಿದೆ. ಭಾರತದಲ್ಲಿ ಆ್ಯಪಲ್ನ ಆನ್ಲೈನ್ ಸ್ಟೋರ್ ಮತ್ತು ಫ್ಲ್ಯಾಗ್ಶಿಪ್ ಸ್ಟೋರ್ ಆರಂಭಿಸುವ ನಿಟ್ಟಿನಲ್ಲಿಯೂ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಆಪಲ್ 2% ಪಾಲು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.