ನವದೆಹಲಿ: ‘ದಿಲ್ಲಿ ರಾಯಿಟ್ಸ್ 2020: ದಿ ಅನ್ಟೋಲ್ಡ್ ಸ್ಟೋರಿ’ ಪುಸ್ತಕವನ್ನು ಪ್ರಕಟಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಹಿಂಪಡೆದುಕೊಂಡಿರುವ ಮತ್ತು ಶಹೀನ್ ಬಾಗ್ ಪ್ರತಿಭಟನೆಯನ್ನು ವೈಭವೀಕರಿಸುವ ಪುಸ್ತಕವನ್ನು ಪ್ರಕಟಿಸಿದ ಬ್ಲೂಮ್ಸ್ಬರಿ ಇಂಡಿಯಾ ಪಬ್ಲಿಕೇಶನ್ ಹೌಸ್ ಜನರ ಭಾರೀ ಆಕ್ರೋಶಕ್ಕೆ ತುತ್ತಾಗಿದೆ.
ದೇಶವಿರೋಧಿ ಮೂಲಭೂತವಾದಿಗಳ ಪ್ರಾಯೋಜಕತ್ವದ ಶಹೀನ್ ಬಾಗ್ ಪ್ರತಿಭಟನೆಯನ್ನು ಒಂದು ಚಳುವಳಿ ಎಂಬಂತೆ ಬಿಂಬಿಸುವ ಪುಸ್ತಕ “ಶಹೀನ್ ಬಾಗ್ : ಫ್ರಂ ಪ್ರೊಟೆಸ್ಟ್ ಟು ಅ ಮೂವ್ಮೆಂಟ್’ ಅನ್ನು ಬ್ಲೂಮ್ಸ್ಬರ್ಗ್ ಪ್ರಕಟಿಸುತ್ತಿದೆ. ಈ ಬಗ್ಗೆ ಅದು ಪ್ರಚಾರ ಟ್ವೀಟ್ ಅನ್ನು ಕೂಡ ಮಾಡಿದೆ.
ಆದರೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗೆಗಿನ ನೈಜ ಕಥೆಯನ್ನು ಆಧರಿಸಿದ ಪುಸ್ತಕವನ್ನು ಪ್ರಕಟಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಅದು ಎಡಪಂಥೀಯರ ಒತ್ತಡದ ಹಿನ್ನೆಲೆಯಲ್ಲಿ ಹಿಂಪಡೆದುಕೊಂಡಿದೆ.
ಬ್ಲೂಮ್ಸ್ಬರ್ಗ್ ನಡೆ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಆಕ್ರೋಶಕ್ಕೆ ಈಡಾಗುವಂತೆ ಮಾಡಿದೆ. ಇನ್ನು ಮುಂದೆ ಪ್ರಕಾಶನ ಹೊರಡಿಸಿರುವ ಪುಸ್ತಕಗಳನ್ನು ಓದುವುದಿಲ್ಲ ಎಂದು ಹಲವಾರು ಮಂದಿ ಬರೆದುಕೊಂಡಿದ್ದಾರೆ. ಕೆಲವು ಲೇಖಕರನ್ನು ಮುಂದೆ ಪ್ರಕಟಿಸಲು ಈ ಪ್ರಕಾಶನದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Not surprised that the same @BloomsburyIndia that is publishing a book on #ShaheenBagh, calling it a “glorious journey” & a “movement” has decided to drop @advmonikaarora‘s book on #DelhiRiotsUntoldStory. These people have controlled the narrative for decades. But not anymore!! https://t.co/vgdlhvWTyP
— Priti Gandhi – प्रीति गांधी (@MrsGandhi) August 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.