ಗೋರಖ್ಪುರ: ಮಹಾರಾಜ್ಗಂಜ್ನ ಸೋನೌಲಿಯಲ್ಲಿ ಭಾರತ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಆತನ ಪಾಸ್ಪೋರ್ಟ್ ಪ್ರಕಾರ, ಆತ ಚೀನಾದ ಪ್ರಜೆ ಶೆನ್ ಲೀ (37) ಎಂದು ಗುರುತಿಸಲಾಗಿದೆ.
ಚೀನಾದ ಪ್ರಜೆಗೆ ಭಾರತಕ್ಕೆ ಮಾನ್ಯ ವೀಸಾ ಇದ್ದರೂ, ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಇಂಡೋ-ನೇಪಾಳ ಗಡಿಯಿಂದ ವಿದೇಶಿ ಪ್ರಜೆಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 22 ರಂದು ಜಮೀನುಗಳ ನಡುವಿನ ಮಾರ್ಗದ ಮೂಲಕ ಅಕ್ರಮವಾಗಿ ದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಲೀಯನ್ನು ಸಶಸ್ತ್ರ ಸೀಮಾ ಬಲದ ಯೋಧರು ಬಂಧಿಸಿದರು ಎಂದು ಮಹಾರಾಜ್ಗಂಜ್ ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. “ನೇಪಾಳದಲ್ಲಿ ಆತನ ಪ್ರವಾಸಿ ವೀಸಾ ಅವಧಿ ಆಗಸ್ಟ್ 4 ರಂದು ಮುಕ್ತಾಯಗೊಂಡಿದೆ, ಆದ್ದರಿಂದ ಅವನು ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ” ಎಂದು ಸೋನೌಲಿ ಎಸ್ಎಚ್ಒ ಅಶುತೋಷ್ ಸಿಂಗ್ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 420 (ಮೋಸ) ಮತ್ತು ವಿದೇಶಿಯರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಚಾರಣೆಯ ಸಮಯದಲ್ಲಿ, ಶೆನ್ ಲೀ ಔಷಧಿ ವ್ಯಾಪಾರಿ ಮತ್ತು ಭಾರತಕ್ಕೆ ಮಾನ್ಯ ವೀಸಾ ಹೊಂದಿರುವುದು ಕಂಡುಬಂದಿದೆ. ಆತ ಜನವರಿ 30 ರಂದು ಚೀನಾದಿಂದ ನವದೆಹಲಿಗೆ ಬಂದಿದ್ದಮತ್ತು ಮಾರ್ಚ್ 8 ರಂದು ನೇಪಾಳದ ಕಠ್ಮಂಡುವಿಗೆ ತೆರಳಿದ್ದ ಎನ್ನಲಾಗಿದೆ.
ಆದರೆ ಆತ ಭಾರತಕ್ಕೆ ಪ್ರವೇಶಿಸಿದ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.