ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯು ಶೀಘ್ರದಲ್ಲೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಹೊಂದಲಿದೆ, ಇದು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಿರಲಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಸೇತುವೆ ಆಗಸ್ಟ್ 2022 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಈ ಸೇತುವೆ ಕಾಶ್ಮೀರ ಕಣಿವೆಯನ್ನು ಜಮ್ಮುವಿನ ಕಾತ್ರ ಮತ್ತು ದೇಶದ ಇತರ ಭಾಗಳೊಂದಿಗೆ ಸಂಪರ್ಕಿಸುತ್ತದೆ. ಇದು ಕತ್ರಾದಿಂದ ಶ್ರೀನಗರಕ್ಕೆ ಪ್ರಯಾಣದ ಸಮಯವನ್ನು 5-6 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
ಉತ್ಪನ್ನ ನಿರ್ವಾಹಕರಾಗಿರುವ ಡೆಪ್ಯೂಟಿ ಚೀಫ್ ಎಂಜಿನಿಯರ್ ಆರ್.ಆರ್. ಮಲಿಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, “ನಮಗೆ ಸೇತುವೆ ನಿರ್ಮಾಣ ಪೂರ್ಣಗೊಳಿಸಲು 2022 ರ ಗಡುವು ಇದೆ. ಇಂತಹ ಕ್ಲಿಷ್ಟಕರ ಭೂಮಿಯಲ್ಲಿ ಸೇತುವೆ ನಿರ್ಮಾಣ ಸುಲಭದ ಕೆಲಸವಲ್ಲ” ಎಂದಿದ್ದಾರೆ.
ವೈಷ್ಣೋ ದೇವಿ ದೇಗುಲಕ್ಕೆ ಹೆಸರುವಾಸಿಯಾದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯು ಅತಿ ಎತ್ತರದ ರೈಲ್ವೆ ಸೇತುವೆ ಯೋಜನೆಯೊಂದಿಗೆ ಪ್ರವಾಸೋದ್ಯಮದಲ್ಲಿ ಪ್ರಮುಖ ಪ್ರಗತಿಯನ್ನು ಪಡೆಯುವ ನಿರೀಕ್ಷೆಯಿದೆ.
“ಈ ಸೇತುವೆ ವಿಭಿನ್ನವಾಗಿರಲಿದೆ. ಇದು ಹೆಲಿಪ್ಯಾಡ್ ಹೊಂದಿರಲಿದೆ, ಆದ್ದರಿಂದ , ದೆಹಲಿಯ ಜನರು ಹೆಲಿಕಾಫ್ಟರ್ ಮೂಲಕ ಇಲ್ಲಿಗೆ ಬರಬಹುದು” ಎಂದು ರಿಯಾಸಿ ಜಿಲ್ಲಾಧಿಕಾರಿ ಇಂದು ಕನ್ವಾಲ್ ಚಿಬ್ ಹೇಳಿದ್ದಾರೆ.
“ಇದು ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಇಲ್ಲಿ ತೀವ್ರವಾದ ಚಟುವಟಿಕೆ ನಡೆಯಲಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಇದು ಮುಗಿಯುವುದನ್ನೇ ನನ್ನ ಜಿಲ್ಲೆಯ ಜನರು ಕಾಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ರೈಲು ಸೇತುವೆಯ ಒಟ್ಟು ಉದ್ದ 1.3 ಕಿ.ಮೀ ಆಗಿದೆ ಮತ್ತು ಇದು ರಿಕ್ಟರ್ ಮಾಪಕದಲ್ಲಿ 7 ಕ್ಕಿಂತ ಹೆಚ್ಚು ಅಳತೆಯ ಭೂಕಂಪವನ್ನು ತಡೆದುಕೊಳ್ಳಬಲ್ಲದು.
ಈ ಯೋಜನೆಯನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದೆ ಮತ್ತು ಇದು ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್ಬಿಆರ್ಎಲ್) ಯೋಜನೆಯ ಒಂದು ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.