ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಕೃತಿಯ ಬಗೆಗಿನ ಪ್ರೀತಿ ಜನರಿಗೆ ತಿಳಿಯದ್ದೇನಲ್ಲ, ತಮ್ಮ ಭಾಷಣಗಳಲ್ಲಿ ಅವರು ಪ್ರಕೃತಿ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.
ಇಂದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮನಮೋಹಕ ದೃಶ್ಯವೊಂದನ್ನು ಅಪ್ಡೇಟ್ ಮಾಡಿದ್ದಾರೆ. ನವಿಲಿಗೆ ಆಹಾರ ತಿನ್ನಿಸುತ್ತಿರುವ ತಮ್ಮ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ‘ಅತ್ಯಮೂಲ್ಯ ಕ್ಷಣ’ ಎಂಬ ಒಕ್ಕಣೆ ಬರೆದಿದ್ದಾರೆ. ಮಾತ್ರವಲ್ಲ ಹಿಂದಿಯಲ್ಲಿ ಮೂರು ಪ್ಯಾರಾಗಳ ಕವನವೊಂದನ್ನೂ ಬರೆದಿದ್ದಾರೆ.
ತಮ್ಮ ದೈನಂದಿನ ಬೆಳಗಿನ ವ್ಯಾಯಾಮದ ಭಾಗವಾಗಿ ಪ್ರಧಾನಿ ಮೋದಿಯವರು ಪ್ರಕೃತಿಯೊಂದಿಗೆ ಸಮಯ ಕಳೆಯುತ್ತಾರೆ. ಈ ಸಮಯದಲ್ಲಿ ಅವರು ನವಿಲು ಸೇರಿದಂತೆ ಇತರ ಪಕ್ಷಿಗಳಿಗೆ ಆಹಾರ ತಿನ್ನಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸ ಲೋಕ ಕಲ್ಯಾಣ್ ಮಾರ್ಗ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿರಬಹುದು ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿರುವ ಆಹಾರವನ್ನು ನವಿಲುಗಳು ಆರಾಮವಾಗಿ ತಿನ್ನುತ್ತಿರುವ ದೃಶ್ಯ ಎಲ್ಲರ ಮನಸ್ಸನ್ನು ಸೋರೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.