ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕ ಭಾನುವಾರ ಬಂಧಿಸಿರುವ ಇಸಿಸ್ ಉಗ್ರ ಸಂಘಟನೆಯ ಸದಸ್ಯ ಮೊಹಮ್ಮದ್ ಮುಸ್ತಾಕೀಮ್ ಖಾನ್ ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದೆ. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಅಪಾರ ಪ್ರಮಾಣದ ಸ್ಫೋಟಕಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿಯಲ್ಲಿ ‘ಫಿದಾಯೀನ್’ (ಆತ್ಮಹತ್ಯೆ) ದಾಳಿ ನಡೆಸಲು ಮುಸ್ತಾಕೀಮ್ ಸಿದ್ಧಪಡಿಸಿದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಧೌಲಾ ಕುವಾನ್ ಮತ್ತು ಕರೋಲ್ ಬಾಗ್ ನಡುವಿನ ರಿಡ್ಜ್ ರಸ್ತೆಯಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಶುಕ್ರವಾರ ರಾತ್ರಿ ಮುಸ್ತಾಕೀಮ್ ಅನ್ನು ಬಂಧಿಸಲಾಗಿತ್ತು. ದೆಹಲಿ ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಬಲರಾಂಪುರಕ್ಕೆ ಸೇರಿದ ಮುಸ್ತಕೀಮ್ ರಾಷ್ಟ್ರ ರಾಜಧಾನಿಯ ಜನದಟ್ಟಣೆ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು.
ಪೊಲೀಸರು ಅವನ ಬಳಿ ಇದ್ದಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದಾರೆ. ಇದು ಸುಮಾರು 15 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿತ್ತು ಎನ್ನಲಾಗಿದೆ. ಅಲ್ಲದೆ, ಬಂಧನದ ಸಮಯದಲ್ಲಿ ಅವನಿಂದ ಪಿಸ್ತೂಲ್ ಸಹ ವಶಪಡಿಸಿಕೊಳ್ಳಲಾಗಿದೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಪೊಲೀಸರ ಡಿಸಿಪಿ (ವಿಶೇಷ ಘಟಕ) ಪಿ.ಎಸ್.ಕುಶ್ವಾಹ್ ಅವರು, “ಎರಡು ಪ್ರೆಶರ್ ಕುಕ್ಕರ್ ಐಇಡಿಗಳನ್ನು ಮೊಹಮ್ಮದ್ ಮುಸ್ತಾಕೀಮ್ ಖಾನ್ ಬಳಿಯಿಂದ ವಶಕ್ಕೆ ಪಡೆಯಲಾಗಿದೆ, ಇತರ ಉತ್ತರಪ್ರದೇಶದ ಬಲರಾಂಪುರದ ನಿವಾಸಿ” ಎಂದಿದ್ದಾರೆ.
ಮುಸ್ತಾಕೀಮ್ ಆಗಸ್ಟ್ 15 ರಂದು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದ, ಆದರೆ ಭಾರೀ ಭದ್ರತಾ ವ್ಯವಸ್ಥೆಗಳಿಂದಾಗಿ ಆತ ದಾಳಿ ನಡೆಸಲು ವಿಫಲರಾಗಿದ್ದಾರೆನೆ ಎಂದು ಡಿಸಿಪಿ ಕುಶ್ವಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.