ಭುವನೇಶ್ವರ್: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸುಂದರ ಮರಳು ಕಲಾಕೃತಿಯ ಮೂಲಕ ಶ್ರದ್ಧಾಂಜಲಿಯನ್ನು ಸಮರ್ಪಿಸಿದ್ದಾರೆ.
ನಾಲ್ಕು ಅಡಿ ಎತ್ತರದ ಮರಳಿನ ಶಿಲ್ಪವನ್ನು ಇವರು ರಚಿಸಿದ್ದು, ಇದರಲ್ಲಿ ‘ಸಾಮಾನ್ಯ ಮನುಷ್ಯನಿಗೆ, ಕ್ಷಿಪಣಿ ಜನಕನಿಗೆ, ಭಾರತ ರತ್ನಕ್ಕೆ, ಜನರ ರಾಷ್ಟ್ರಪತಿಗೆ ಶ್ರದ್ಧಾಂಜಲಿ’ ಎಂಬ ಸಂದೇಶ ಬರೆದಿದ್ದಾರೆ.
ದೇಶದಲ್ಲಿ ಮರಳು ಕಲೆ ಅಷ್ಟೊಂದು ಪರಿಚಿತವಲ್ಲದ ಸಂದರ್ಭ, 2005ರಲ್ಲಿ ಕಲಾಂ ನನ್ನನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡು, ನನ್ನನ್ನು ಪ್ರೋತ್ಸಾಹಿಸಿದ್ದರು. ಅಲ್ಲದೇ ಅವರ ವೈಯಕ್ತಿಕ ಅಕೌಂಟ್ನಿಂದ 3 ಸಾವಿರ ರೂಪಾಯಿಯ ಚೆಕ್ನ್ನು ನನಗೆ ನೀಡಿದ್ದರು, ಇದು ನನಗೆ ಸಿಕ್ಕ ಅತಿದೊಡ್ಡ ಗೌರವ.
ಇಂದು ನಾವು ಕ್ಷಿಪಣಿಗಳ ಜನಕನನ್ನು, ಸರಳ ಹೃದಯ, ಸುಂದರ ಮನಸ್ಸಿದ್ದ, ಪ್ರೇರಣಾದಾಯಕ ಆತ್ಮ ಹೊಂದಿದ್ದ ಜನರ ರಾಷ್ಟ್ರಪತಿಯನ್ನು ಕಳೆದುಕೊಂಡಿದ್ದೇವೆ ಎಂದು ಸುದರ್ಶನ್ ದುಃಖ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.