ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸಹಯೋಗದೊಂದಿಗೆ ಆಯೋಜನೆ ಮಾಡಿದ ಆನ್ಲೈನ್ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಅಭಿನಂದಿಸಿದ್ದಾರೆ.
ಆತ್ಮ ನಿರ್ಭರತೆ ಮತ್ತು ದೇಶಭಕ್ತಿ ರಾಷ್ಟ್ರದ ಪ್ರಗತಿಯ ಹೊಸ ಧ್ಯೇಯ ಎಂಬ ವಿಷಯವನ್ನು ಆಧರಿಸಿ ಕಿರುಚಿತ್ರವನ್ನು ನಿರ್ಮಾಣ ಮಾಡುವಂತೆ ತಿಳಿಸಲಾಗಿತ್ತು. ‘ದೇಶಭಕ್ತಿ-ಆತ್ಮನಿರ್ಭರತೆ ಕಡೆಗೆ ಪಯಣ’ ಎಂಬ ಥೀಮ್ ಅನ್ನು ಸ್ಪರ್ಧೆಗೆ ನೀಡಲಾಗಿತ್ತು.
ಟ್ವೀಟ್ ಮಾಡಿರುವ ಜಾವ್ಡೇಕರ್ ಅವರು, “ಕಿರುಚಿತ್ರದಲ್ಲಿ ವಿಜೇತರಾದವರಿಗೆ ಹೃದಯಪೂರ್ವಕ ಅಭಿನಂದನೆಗಳು. ಈ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ ಎಲ್ಲಾ ಭಾಗಿದಾರರಿಗೆ ಅಭಿನಂದನೆಗಳು” ಎಂದಿದ್ದಾರೆ.
ಅಭಿಜಿತ್ ಪೌಲ್ ಎಂಬುವವರು ‘ಆಮ್ ಐ?’ ಎನ್ನುವ ಕಿರು ಚಿತ್ರವನ್ನು ನಿರ್ಮಿಸಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದೆಬೊಜೊ ಸಂಜೀವ್ ಎನ್ನುವವರ ‘ಅಬ್ ಇಂಡಿಯಾ ಬನೇಗ ಭಾರತ್’ ಕಿರುಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ. ಯುವರಾಜ್ ಗೋಕುಲ್ ಎನ್ನುವವರ ‘ 10 ರೂಪೀಸ್’ ಚಿತ್ರಕ್ಕೆ ಮೂರನೇ ಪ್ರಶಸ್ತಿ ಲಭ್ಯವಾಗಿದೆ.
ಜುಲೈ 14ರಂದು ಮೈಗೌನಲ್ಲಿ ಈ ಸ್ಪರ್ಧೆಯನ್ನು ಆರಂಭಿಸಲಾಗಿತ್ತು. ಆಗಸ್ಟ್ 7ಕ್ಕೆ ಇದು ಕೊನೆಗೊಂಡಿತ್ತು.
Heartiest congratulations to the winners of #NFDC #ShortFilm #Contest on the theme of '#Patriotism -Marching towards #Atmanirbharta' & thank you to all the participants for their outstanding contribution in making this competition a roaring success! #PatrioticFilmFestival pic.twitter.com/gy9DoA1a3b
— Prakash Javadekar (@PrakashJavdekar) August 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.