ಲಂಡನ್: ಲಂಡನ್ನ ನೀಸ್ಡೆನ್ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದ ಬೆಳ್ಳಿ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಿನ್ಸ್ ಚಾರ್ಲ್ಸ್ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸಿಸಿದರು. 1995 ರಲ್ಲಿ ಉದ್ಘಾಟನೆಯಾದ ಲಂಡನ್ ದೇವಾಲಯವು 25 ವರ್ಷಗಳನ್ನು ಪೂರೈಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತೋಷವನ್ನುಟ್ವಿಟರ್ ಮೂಲಕ ಹಂಚಿಕೊಂಡಿದ್ದದಾರೆ. ಪ್ರಿನ್ಸ್ ಚಾರ್ಲ್ಸ್ ಲಂಡನ್ ದೇವಾಲಯದ ವೀಡಿಯೊ ಸಂದೇಶದ ಲಿಂಕ್ ಜೊತೆಗೆ ಟ್ವಿಟರ್ನಲ್ಲಿ ಅಭಿನಂದನಾ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಲಂಡನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನೀಸ್ಡೆನ್ ದೇವಾಲಯದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಅವರು ಶುಭ ಹಾರೈಕೆ ನೀಡಿದ್ದು, ತಮ್ಮ ಭೇಟಿಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಸ್ವಾಮಿನಾರಾಯಣ ಮಂದಿರದ ಸಮುದಾಯ ಸೇವೆಯನ್ನು ಮೋದಿ ಶ್ಲಾಘಿಸಿದ್ದಾರೆ.
“ನೀಸ್ಡೆನ್ ಟೆಂಪಲ್ ಇದು ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ. ಅನೇಕ ಸಮುದಾಯ ಸೇವಾ ಉಪಕ್ರಮಗಳಲ್ಲಿ ದೇವಾಲಯವು ಮುಂಚೂಣಿಯಲ್ಲಿದೆ. ಇದು ಜನರನ್ನು ಒಟ್ಟುಗೂಡಿಸಿದೆ ಮತ್ತು ಮಾನವೀಯತೆಗಾಗಿ ಕೆಲಸ ಮಾಡಲು ಪ್ರೇರೇಪಿಸಿದೆ” ಎಂದು ಮೋದಿ ಟ್ವಿಟ್ನಲ್ಲಿ ತಿಳಿಸಿದ್ದಾರೆ.
“ಭಾರತದ ಹೊರಗಿನ ಈ ರೀತಿಯ ಮೊದಲನೇಯ ದೇಗುಲವಾಗಿರುವ ನೀಸ್ಡೆನ್ ಟೆಂಪಲ್ ಸ್ಥಳೀಯ ಸಮುದಾಯದ ಪೂಜಾ ಸ್ಥಳವಾಗಿ, ಕಲಿಕೆ, ಆಚರಣೆ, ಶಾಂತಿ ಮತ್ತು ಸಮುದಾಯ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಚಾರ್ಲ್ಸ್ ಬಣ್ಣಿಸಿದ್ದಾರೆ.
Neasden Temple marks it’s silver jubilee. The Temple has been at the forefront of many community service initiatives. It has brought people together and inspired them to work for humanity.
When I was Gujarat CM, I had the honour of visiting the Temple. #Neasdentemple25 #LM25 pic.twitter.com/SsFzI2oUJP
— Narendra Modi (@narendramodi) August 20, 2020
The first of its kind outside India, @NeasdenTemple serves the local community as a place of worship, learning, celebration, peace and community service. #NeasdenTemple25
Watch HRH’s message in full ⬇️https://t.co/4lEthOy1Uk pic.twitter.com/SZsAt9Ud3Z
— The Prince of Wales and The Duchess of Cornwall (@ClarenceHouse) August 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.