ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ʼದಿ ಕೊರೋನಾ ಫೈರರ್ಸ್ʼ ಎಂಬ ಸಂವಾದಾತ್ಮಕ ವಿಡಿಯೋ ಗೇಮ್ ಅನ್ನು ಪ್ರಾರಂಭಿಸಿದ್ದಾರೆ. ಕೊರೋನಾದ ಬಗ್ಗೆ ಅರಿವು ಮೂಡಿಸುವ ವಿಡಿಯೋ ಗೇಮ್ ಇದಾಗಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ಸೂಕ್ತವಾದ ಅಭ್ಯಾಸಗಳನ್ನು ಅನುಸರಿಸಬೇಕೆಂದು ಒತ್ತಾಯಿಸಿರುವ ಸಚಿವರು, ಗುರುವಾರ ಎರಡು ಹೊಸ ವೀಡಿಯೊಗಳನ್ನು ಕೂಡ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹರ್ಷವರ್ಧನ್, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರಿಗೆ ಸರಿಯಾದ ಸಾಧನಗಳು ಮತ್ತು ನಡವಳಿಕೆಗಳನ್ನು ಕಲಿಸಲು ಈ ಆಟವು ಹೊಸ ಮತ್ತು ಅತ್ಯಂತ ಸೃಜನಶೀಲ ಮಾರ್ಗವನ್ನು ಒದಗಿಸುತ್ತದೆ ಎಂದು ಹೇಳಿದರು. ನೈಜ ಜಗತ್ತಿನಲ್ಲಿ ಆಟಗಾರರ ಕ್ರಮಗಳ ಮೇಲೆ ಪ್ರಭಾವ ಬೀರಲು ಈ ಆಟವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮತ್ತು ಸೋಂಕಿನಿಂದ ಪಾರಾಗಲು ಇದು ನೆನಪು ಮಾಡಿಕೊಡುತ್ತದೆ. ಎರಡು ಪ್ರಚಾರದ ವೀಡಿಯೊಗಳ ಜೊತೆಗೆ ಇದು ಸರಳವಾಗಿ ವಿನ್ಯಾಸಗೊಳಿಸಲಾದ ಮತ್ತು ಆಹ್ಲಾದಿಸಬಹುದಾದ ಮಾಧ್ಯಮವಾಗಿದ್ದು, ವ್ಯಾಪಕವಾಗಿ ಸಾರ್ವಜನಿಕರಿಗೆ ಗಂಭೀರ ಸಂದೇಶವನ್ನು ನೀಡುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.