ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯವನ್ನು ಹೇಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಪುಟಗಳ ಭಾವನಾತ್ಮಕ ಪತ್ರಗಳನ್ನು ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಪ್ರಧಾನಿಯವರು ಬರೆದ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಕ್ಷೇತ್ರದಲ್ಲಿ ಧೋನಿ ಮಾಡಿದ ಸಾಧನೆಯನ್ನು, ಭಾರತ ಮತ್ತು ವಿಶ್ವ ಕ್ರೀಡೆಗಾಗಿ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಎಂದಿನಂತೆ ನಿರ್ಭೀತ ಶೈಲಿಯಲ್ಲಿ ನೀವು ಮಾಡಿದ ಒಂದು ಪೋಸ್ಟ್ ಇಡೀ ರಾಷ್ಟ್ರವನ್ನು ಭಾವುಕವಾಗಿಸಿತು, ಅದು ಚರ್ಚೆಯ ಕೇಂದ್ರವಾಯಿತು. ಅಂದು ದೇಶದ 130 ಕೋಟಿ ಜನರು ಅತೀವ ನಿರಾಸೆಗೊಂಡರು. ಆದರೂ ಕ್ರಿಕೆಟ್ ಕ್ಷೇತ್ರಕ್ಕೆ ನೀವು ನೀಡಿದ ಅಪಾರ ಕೊಡುಗೆಗಾಗಿ ಜನರು ನಿಮಗೆ ಸದಾ ಕೃತಜ್ಞರಾಗಿರುತ್ತಾರೆ” ಇನ್ನು ಮೋದಿ ಧೋನಿಯವರ ನಿವೃತ್ತಿಯ ಟ್ವಿಟ್ ಅನ್ನು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಬರೆದ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಧೋನಿ,”ಕಲಾವಿದ, ಯೋಧ ಮತ್ತು ಕ್ರೀಡಾಪಟು ತನ್ನ ಸಾಧನೆ, ಪರಿಶ್ರಮ ಮತ್ತು ತ್ಯಾಗ ಗಮನಿಸಲ್ಪಡಬೇಕು ಎಂದು ಬಯಸುತ್ತಾನೆ ಮತ್ತು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಬೇಕು ಎಂದು ಬಯಸುತ್ತಾನೆ. ನಿಮ್ಮ ಶ್ಲಾಘನೆ ಮತ್ತು ಶುಭಹಾರೈಕೆಗಳಿಗಾಗಿ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಯವರೇ” ಎಂದು ಒಕ್ಕಣೆ ಬರೆದಿದ್ದಾರೆ.
An Artist,Soldier and Sportsperson what they crave for is appreciation, that their hard work and sacrifice is getting noticed and appreciated by everyone.thanks PM @narendramodi for your appreciation and good wishes. pic.twitter.com/T0naCT7mO7
— Mahendra Singh Dhoni (@msdhoni) August 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.