ನವದೆಹಲಿ: ಭಾರತದ ಪ್ರಸಿದ್ಧ ಡಿಜಿಟಲ್ ಪಾವತಿ ವ್ಯವಸ್ಥೆ, ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಈಗ ತನ್ನ ಮೂಲ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಯೊಂದಿಗೆ ಜಾಗತಿಕ ಮಟ್ಟದಲ್ಲಿ ಸಾಗಲು ಸಜ್ಜಾಗಿದೆ. ತನ್ನ ವ್ಯವಹಾರವನ್ನು ಭಾರತವನ್ನು ಮೀರಿ ಆಚೆ ತೆಗೆದುಕೊಂಡು ಹೋಗಲು ಹೊಸ ಅಂಗಸಂಸ್ಥೆ ಎನ್ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಅನ್ನು ಸ್ಥಾಪಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಎನ್ಐಪಿಎಲ್ ಆರಂಭದೊಂದಿಗೆ ಎನ್ಪಿಸಿಐಯು ಯುಪಿಐ ಮತ್ತು ಸರ್ಕಾರ ಬೆಂಬಲಿತ ರುಪೇ ಕಾರ್ಡ್ ಅನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದೆ ಮತ್ತು ಇತರ ದೇಶಗಳಿಗೆ ನೈಜ-ಸಮಯದ ಪಾವತಿ ವ್ಯವಸ್ಥೆ ಅಥವಾ ದೇಶೀಯ ಕಾರ್ಡ್ ಯೋಜನೆಗಳ ಸ್ಥಾಪನೆಯಲ್ಲಿ ಸಹಾಯ ಮಾಡುತ್ತದೆ. ಇದು ಭಾರತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದರಿಂದ ಪ್ರೇರಿತವಾಗಿರುವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಹಲವಾರು ರಾಷ್ಟ್ರಗಳು ಈ ವ್ಯವಸ್ಥೆಗಳಲ್ಲಿ ಆಸಕ್ತಿಯನ್ನು ತೋರಿಸಿವೆ.
ಎನ್ಪಿಸಿಐನ ಅಂತರರಾಷ್ಟ್ರೀಯ ವಿಸ್ತರಣೆಯು ರುಪೇ ಮತ್ತು ಯುಪಿಐನ ಸ್ವೀಕಾರ ಜಾಲಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಇದು ಭಾರತೀಯ ಪ್ರಯಾಣಿಕರಿಗೆ ಈ ಸ್ವದೇಶಿ ಪಾವತಿ ಚಾನೆಲ್ಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ಬಳಸಲು ಮತ್ತಷ್ಟು ಅಧಿಕಾರ ನೀಡುತ್ತದೆ.
ಈ ನಡುವೆ, ರುಪೇ ಕಾರ್ಡ್ ಈಗಾಗಲೇ ಜಾಗತಿಕ ವಿಸ್ತರಣೆಯಲ್ಲಿದೆ, ಅದರ ಸೇವೆಗಳನ್ನು ಸಿಂಗಾಪುರ್, ಭೂತಾನ್, ಮಾಲ್ಡೀವ್ಸ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಮ್ಯಾನ್ಮಾರ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಪ್ರಾರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.