ನವದೆಹಲಿ: ಕ್ರೀಡಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುವ ದೇಶದ ಅತ್ಯಂತ ಶ್ರೇಷ್ಠ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನ 2020 ರ ಸಾಲಿನ ಪುರಸ್ಕಾರಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ನಾಲ್ವರನ್ನು ಶಿಫಾರಸ್ಸು ಮಾಡಲಾಗಿದೆ.
ಭಾರತದ ಕ್ರಿಕೆಟ್ ತಂಡದ ಉಪ ನಾಯಕ, ಆರಂಭಿಕ ಬ್ಯಾಟ್ಸ್ನ್ ಆಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ, ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿರುವ ವಿನೇಶ್ ಫೋಗಾಟ್, ಟೇಬಲ್ ಟೆನ್ನಿಸ್ ಚಾಂಪಿಯನ್ ಮನಿಕಾ ಭಾತ್ರಾ, ಪ್ಯಾರಾಂಲಿಪಿಕ್ನ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರನ್ನು ಈ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಿ ನೀಡಲಾಗುವ ಅರ್ಜುನ ಪ್ರಶಸ್ತಿಗೆ ಕ್ರಿಕೆಟರ್ ಇಶಾಂತ್ ಶರ್ಮಾ, ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್), ಅತನು ದಾಸ್ (ಆರ್ಚರಿ), ಅರ್ಪೀಂದರ್ ಸಿಂಗ್ (ಅಥ್ಲೆಟಿಕ್ಸ್), ಹಿಮಾ ದಾಸ್ (ಅಥ್ಲೆಟಿಕ್ಸ್), ಮಂಜೀತ್ ಸಿಂಗ್ (ಅಥ್ಲೆಟಿಕ್ಸ್), ಲವೆಲಿನಾ (ಬಾಕ್ಸಿಂಗ್), ಸೋನಿಯಾ ಲಾಥರ್ (ಬಾಕ್ಸಿಂಗ್), ಮನಿಷ್ ಕೌಶಿಕ್(ಬಾಕ್ಸಿಂಗ್), ದೀಪ್ತಿ ಶರ್ಮಾ (ಕ್ರಿಕೆಟ್), ರೂಪೀಂದರ್ಪಾಲ್ ಸಿಂಗ್ (ಹಾಕಿ), ಬೀರೇಂದರ್ ಲಾಕ್ರಾ (ಹಾಕಿ), ದೀಪ್ ಗ್ರೇಸ್ ಎಕ್ಕಾ (ಹಾಕಿ), ಸುಖ್ಮೀತ್ ಸಿಂಗ್ (ರೋವಿಂಗ್), ದಟ್ಟು (ರೋವಿಂಗ್), ಮನು ಭಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮನನ್ ಚಂದ್ರ (ಸ್ನೂಕರ್), ದಿವಿಜ್ ಶರನ್ (ಟೆನ್ನಿಸ್), ಮಧುರಿಕಾ ಪಾಟ್ಕರ್(ಟೇಬಲ್ ಟೆನ್ನಿಸ್), ಆರ್ವಿ ರಾಹುಲ್ (ವೈಟ್ಲಿಫ್ಟಿಂಗ್), ರಾಹುಲ್ ಅವೇರ್ (ಕುಸ್ತಿ), ದೀಪಿಕಾ ಠಾಕೂರ್ (ಹಾಕಿ), ಸಾಕ್ಷಿ ಮಲಿಕ್ (ಕುಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ.
ನ್ಯಾಷನಲ್ ಸ್ಪೋರ್ಟ್ಸ್ ಅವಾರ್ಡ್ ಸೆಲೆಕ್ಷನ್ ಕಮಿಟಿ ಈ ಸಂಬಂಧ ಸಭೆ ನಡೆಸಿ, ಕ್ರೀಡಾಪಟುಗಳ ಹೆಸರನ್ನು ಅಂತಿಮಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.