ನವದೆಹಲಿ: ಮುಂದಿನ 15 ದಿನಗಳೊಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಯೋಜನೆ ‘ಪ್ರಾಜೆಕ್ಟ್ ಡಾಲ್ಫಿನ್’ ಅನ್ನು ಪ್ರಕಟಿಸಲಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೊನ್ನೆ ನಡೆದ ದೇಶದ 74 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಮೋದಿ ತಮ್ಮ ಭಾಷಣದಲ್ಲಿ ಪ್ರಾಜೆಕ್ಟ್ ಡಾಲ್ಫಿನ್ ಬಗ್ಗೆ ಮಾತನಾಡಿದ್ದು, ಇದು ಜೀವ ವೈವಿಧ್ಯಗಳ ಉಳಿವಿನ ದೃಷ್ಟಿಯಿಂದ ಮುಖ್ಯವಾಗಲಿದೆ. ಜೊತೆಗೆ ಹಲವು ಉದ್ಯೋಗಗಳ ಸೃಷ್ಟಿಯನ್ನು ಮಾಡಲಿರುವುದಾಗಿ ತಿಳಿಸಿರುವುದನ್ನೂ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದು, ಮುಂದಿನ 15 ದಿನಗಳಲ್ಲಿ ಈ ಯೋಜನೆಯನ್ನು ಮೋದಿ ಘೋಷಿಸಲಿರುವುದಾಗಿಯೂ ತಿಳಿಸಿದ್ದಾರೆ.
ಭಾರತದ ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಡಾಲ್ಫಿನ್ಗಳಿವೆ. ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ಥಾನ, ಪ.ಬಂಗಾಳದ ನದಿಗಳಲ್ಲಿಯೂ ಡಾಲ್ಫಿನ್ ಸಂತತಿ ಇದೆ. 2010 ರಲ್ಲಿ ಗಂಗಾ ನದಿಯಲ್ಲಿರುವ ಡಾಲ್ಫಿನ್ಗಳನ್ನು ರಾಷ್ಟ್ರೀಯ ಜಲಚರ ಪ್ರಾಣಿಗಳು ಎಂದೂ ಘೋಷಿಸಲಾಗಿದೆ. ಇದೀಗ ಡಾಲ್ಫಿನ್ಗಳ ಉಳಿವಿಗೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.