ನವದೆಹಲಿ: ಮಾರಿಷಸ್ ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಭಾರತ ನಿರ್ಮಿತ ಹೆಲಿಕಾಪ್ಟರ್ ಧ್ರುವ್ ಅನ್ನು ಬಳಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಎಚ್ಎಎಲ್ನ ಧ್ರುವ್ ಮತ್ತು 3 ಚೇತಕ್ ಹೆಲಿಕಾಪ್ಟರ್ಗಳು ಎಂವಿ ವಕಾಶಿಯೊ ಹಡಗಿನಿಂದ ಎಣ್ಣೆಯನ್ನು ಹೊರತೆಗೆಯಲು ಸಹಾಯ ಮಾಡುತ್ತಿವೆ. ಭಾರತವು 2016 ರ ಡಿಸೆಂಬರ್ನಲ್ಲಿ ಮಾರಿಷಸ್ ಸರ್ಕಾರಕ್ಕೆ 1 ಧ್ರುವ್ ಮತ್ತು 2 ಚೇತಕ್ ಹೆಲಿಕಾಪ್ಟರ್ಗಳನ್ನು ಉಡುಗೊರೆಯಾಗಿ ನೀಡಿತ್ತು.
ಎಚ್ಎಎಲ್ ಧ್ರುವ್ ಯುಟಿಲಿಟಿ ಹೆಲಿಕಾಪ್ಟರ್ ಆಗಿದ್ದು, ಇದನ್ನು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಮಾರ್ಚ್ 2017 ರೊಳಗೆ ಒಟ್ಟು 228 ಧ್ರುವ ಹೆಲಿಕಾಪ್ಟರ್ಗಳನ್ನು ಉತ್ಪಾದಿಸಲಾಗಿದೆ. ಇದರಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ 216 ಸೇರಿದಂತೆ, ಇತರವುಗಳನ್ನು ಮಾಲ್ಡೀವ್ಸ್, ನೇಪಾಳ ಸೇನೆ ಮತ್ತು ಮಾರಿಷಸ್ ಪೊಲೀಸರಿಗೆ ಸರಬರಾಜು ಮಾಡಲಾಗಿದೆ.
ಭಾರತವು ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಮತ್ತು ಕೆಲವೇ ವಾರಗಳ ಹಿಂದೆ ರಕ್ಷಣಾ ಸಚಿವಾಲಯವು 101 ಮಿಲಿಟರಿ ಪರಿಕರಗಳ ಆಮದಿಗೆ ನಿರ್ಬಂಧವನ್ನು ಹೇರಿದೆ.
ಇನ್ನು ಚೇತಕ್ ಹೆಲಿಕಾಪ್ಟರ್ಗಳ ವಿಷಯಕ್ಕೆ ಬಂದರೆ, ಎಚ್ಎಎಲ್ 1962 ರಲ್ಲಿ ಸುಡ್ ಏವಿಯೇಷನ್ (ಪ್ರಸ್ತುತ ಎಂ / ಎಸ್ ಏರ್ಬಸ್) ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೆಲಿಕಾಪ್ಟರ್ಗಳ ತಯಾರಿಕೆಯನ್ನು ಪ್ರಾರಂಭಿಸಿತು. 1965 ರಲ್ಲಿ ‘ಫ್ಲೈ ಅವೇ’ ಸ್ಥಿತಿಯಲ್ಲಿ ಮೊದಲ ಚೇತಕ್ ಅನ್ನು ವಿತರಿಸಲಾಯಿತು. ಮಾರಿಷಸ್ ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಬಳಸುವ ಚೇತಕ್ಗಳಲ್ಲಿ ಒಂದನ್ನು 1987 ರಲ್ಲಿ ಆ ದೇಶಕ್ಕೆ ನೀಡಲಾಯಿತು.
“ಪರಿಸರ ತುರ್ತುಸ್ಥಿತಿ” ಎಂದು ಘೋಷಿಸಲ್ಪಟ್ಟ ತೈಲ ಸೋರಿಕೆಯ ಬಿಕ್ಕಟ್ಟನ್ನು ಎದುರಿಸಲು ಮಾರಿಷಸ್ ದೇಶಕ್ಕೆ ಸಹಾಯ ಮಾಡಲು ಭಾರತ ನಿನ್ನೆ ಮಾರಿಷಸ್ಗೆ ಉಪಕರಣಗಳು ಮತ್ತು 10 ಸದಸ್ಯರ ತಂಡವನ್ನು ಕಳುಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.