ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ ) ತನ್ನ ಎಲ್ಲಾ ಗಡಿ ಪೋಸ್ಟ್ಗಳು ಮತ್ತು ರಚನೆಗಳಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ ಅನ್ನು ಪ್ರಾರಂಭಿಸಿದೆ. ಫಿಟ್ ಇಂಡಿಯಾಕ್ಕಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಗಡಿ ಕಾಯುತ್ತಾ ದೇಶದ ರಕ್ಷಣೆ ಮಾಡುತ್ತಿರುವ ಐಟಿಬಿಪಿ ಯೋಧರು ಜನರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನೂ ಮಾಡುತ್ತಿದ್ದಾರೆ.
ಈ ಅಭಿಯಾನದ ಸಮಯದಲ್ಲಿ ಐಟಿಬಿಪಿ ಪಡೆಗಳು ಮತ್ತು ಅಧಿಕಾರಿಗಳು 10 ಕಿಲೋಮೀಟರ್ ನಡಿಗೆಯನ್ನು ಕೈಗೊಳ್ಳಲಿದ್ದಾರೆ. ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಆಗಸ್ಟ್ 15 ರಂದು ಈ ಅಭಿಯಾನ ಪ್ರಾರಂಭವಾಯಿತು. ಇದು ಈ ವರ್ಷದ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಮುಕ್ತಾಯಗೊಳ್ಳಲಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಎಲ್ಲಾ ಸ್ಥಳಗಳಲ್ಲಿ ಸಂಬಂಧಿತ ಪ್ರದೇಶಗಳ ನಾಗರಿಕರ ಸಹಯೋಗದೊಂದಿಗೆ ಓಟವನ್ನು ಆಯೋಜಿಸಲು ಐಟಿಬಿಪಿ ಯೋಜಿಸಿದೆ. ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸಿ ಅಭಿಯಾನದ ಸಮಯದಲ್ಲಿ ಅನೇಕ ಸಮಾವೇಶಗಳು ಮತ್ತು ಇತರ ಸಾರ್ವಜನಿಕ ಕಾರ್ಯಗಳನ್ನು ಸಹ ಆಯೋಜಿಸಲಾಗುತ್ತದೆ.
.@ITBP_official launches fit India freedom run at all its border posts and formations in the country. Campaign aimed at generating awareness among the masses for #FitIndia. pic.twitter.com/EzuNzoDyvw
— Prasar Bharati News Services (@PBNS_India) August 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.