ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಕಳೆದ ಕೆಲವು ದಿನಗಳಿಂದ ಭಾರತೀಯ ಭದ್ರತಾ ಪಡೆಗಳಿಂದ ಅದೆಷ್ಟೋ ಉಗ್ರರ ವಧೆ, ಬಂಧನವೂ ಆಗಿದೆ. ಆದರೂ ಬುದ್ಧಿ ಕಲಿಯದ ಪಾಕಿಸ್ಥಾನ ಪ್ರೇರಿತ ಉಗ್ರರು ಮತ್ತೊಂದು ಅವಾಂತರ ನಡೆಸಲು ಯೋಜಿಸಿ ಸಂಚೊದನ್ನು ನಡೆಸಿದ್ದಾರೆ. ಭಾರತದ ಭದ್ರತಾ ಪಡೆಗಳ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಈ ಭಾರೀ ಪ್ರಮಾಣದ ಸಂಚು ತಲೆಕೆಳಗಾದ ಘಟನೆ ನಡೆದಿದೆ.
ಪುಲ್ವಾಮಾದ ತುಜಾನ್ ಪ್ರದೇಶದಲ್ಲಿರುವ ಸೇತುವೆಯೊಂದರ ಕೆಳಗೆ ಉಗ್ರಗಾಮಿಗಳು ಭೀಕರ ದಾಳಿ ನಡೆಸಲು ಪೂರಕವಾಗಿ ಅತ್ಯಾಧುನಿಕ ಸ್ಫೋಟಕ ವಸ್ತುಗಳನ್ನು ಇರಿಸಿದ್ದರು. ಈ ಹಿಂದೊಮ್ಮೆ ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ್ದ ಮಾದರಿಯಲ್ಲಿಯೇ ಈ ಸಂಚನ್ನು ರೂಪಿಸಲಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಈ ಸಂಚನ್ನು ವಿಫಲಗೊಳಿಸಿದ್ದಾರೆ. ಜೊತೆಗೆ ಭಾರೀ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಂಡು ನಡೆಯಲಿದ್ದ ಗಂಭೀರ ಅನಾಹೂತವೊಂದನ್ನು ತಪ್ಪಿಸಿದ್ದಾರೆ.
ಇನ್ನು ಈ ಸೇತುವೆ ಪ್ರದೇಶವನ್ನು ಭಾರತೀಯ ಭದ್ರತಾ ಪಡೆಗಳು ಹೆಚ್ಚಿನ ಸಂದರ್ಭದಲ್ಲಿ ಬಳಕೆ ಮಾಡುತ್ತಿದ್ದರು. ಇದನ್ನು ಗಮನಿಸಿಕೊಂಡೇ ಉಗ್ರರು ಈ ದುಷ್ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದಾರೆ. ಆದರೆ ಭದ್ರತಾ ಪಡೆಗಳ ಸಮಯಪ್ರಜ್ಞೆಯಿಂದ ನಡೆಯಲಿದ್ದ ದೊಡ್ಡ ಅಪಾಯವೊಂದು ತಪ್ಪಿಹೋಗಿದೆ ಎಂದು ಐಜಿಪಿ ವಿಜಯ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.