ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ವ್ಯವಸ್ಥೆಯನ್ನು 74 ನೇ ಸ್ವಾತಂತ್ರ್ಯ ದಿನಾಚರಣೆಯಂದು ಶನಿವಾರ ಕೆಂಪು ಕೋಟೆ ಬಳಿ ನಿಯೋಜಿಸಲಾಗಿದೆ.
ಡಿಆರ್ಡಿಒ-ಅಭಿವೃದ್ಧಿಪಡಿಸಿದ ವ್ಯವಸ್ಥೆಯು 3 ಕಿಲೋಮೀಟರ್ಗಳಷ್ಟು ದೂರದಲ್ಲಿನ ಮೈಕ್ರೋ ಡ್ರೋನ್ಗಳನ್ನು ಪತ್ತೆ ಹಚ್ಚಬಲ್ಲದು ಮತ್ತು ಅದನ್ನು ಜಾಮ್ ಮಾಡಬಲ್ಲದು. ಲೇಸರ್ ಶಸ್ತ್ರಾಸ್ತ್ರದ ವ್ಯಾಟೇಜ್ಗೆ ಅನುಗುಣವಾಗಿ 1-2.5 ಕಿಲೋಮೀಟರ್ಗಳಷ್ಟು ಗುರಿಯನ್ನು ತಗ್ಗಿಸಲು ಲೇಸರ್ ಅನ್ನು ಬಳಸಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಪಶ್ಚಿಮ ಮತ್ತು ಉತ್ತರ ವಲಯಗಳಲ್ಲಿ ಹೆಚ್ಚಿದ ಡ್ರೋನ್ ಆಧಾರಿತ ಚಟುವಟಿಕೆಗೆ ಇದು ಪರಿಣಾಮಕಾರಿ ಪ್ರತ್ಯುತ್ತರವಾಗಿದೆ.
ಇಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜವನ್ನು ಹಾರಿಸಿದರು ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸಂದರ್ಭ ಇದಾಗಿದೆ ಎಂದು ಹೇಳಿದರು.
ಕೊರೋನಾ ಕಾರಣದಿಂದಾಗಿ ಈ ಬಾರಿ ಸ್ವಾತಂತ್ರ್ಯೋತ್ಸವದಲ್ಲಿ ಹೆಚ್ಚು ಜನರು ಭಾಗಿಯಾಗಲಿಲ್ಲ. ಶಾಲಾ ಮಕ್ಕಳ ಗೈರು ಎದ್ದು ಕಾಣುತ್ತಿತ್ತು. ಆದರೂ ಪ್ರಧಾನಿ ಎಂದಿನ ಉತ್ಸಾಹದಲ್ಲೇ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.