ನವದೆಹಲಿ: ಕೊರೋನಾವೈರಸ್ ಅನ್ನು ನಿಭಾಯಿಸಲು ಅಗತ್ಯವಾಗಿರುವ ಹೆಚ್ಚಿನ ಎಲ್ಲಾ ವೈದ್ಯಕೀಯ ಸರಬರಾಜುಗಳನ್ನು ಈಗ ದೇಶೀಯವಾಗಿ ತಯಾರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
“ಭಾರತ ಸರ್ಕಾರವು ಪೂರೈಸುತ್ತಿರುವ ಹೆಚ್ಚಿನ ಕೊರೋನಾ ಸಂಬಂಧಿತ ಉತ್ಪನ್ನಗಳನ್ನು ಆರಂಭದಲ್ಲಿ ದೇಶದಲ್ಲಿ ತಯಾರಿಸಲಾಗುತ್ತಿರಲಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯ ಹಿನ್ನಲೆಯಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಇವುಗಳ ಲಭ್ಯತೆಯ ಕೊರತೆ ಸೃಷ್ಟಿಯಾಗಿದೆ. ಹೀಗಾಗಿ ವೈದ್ಯಕೀಯ ಪರಿಕರಗಳ ದೇಶೀಯ ಉತ್ಪಾದನೆಗೆ ಉತ್ತೇಜನವನ್ನು ನೀಡಲಾಗುತ್ತಿದೆ” ಎಂದಿದೆ.
ಆರೋಗ್ಯ ಸಚಿವಾಲಯವು ಇತ್ತೀಚಿನ ತಿಂಗಳುಗಳಲ್ಲಿ ದೇಶೀಯ ಉದ್ಯಮಗಳಿಗೆ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇಗಳು), ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್ಗಳಂತಹ ಅಗತ್ಯ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ಮತ್ತು ಪೂರೈಸಲು ಪ್ರೋತ್ಸಾಹ ನೀಡಿದೆ ಮತ್ತು ಅವುಗಳ ಹಾದಿಯನ್ನು ಸುಗಮಗೊಳಿಸಿದೆ. ಇದು ಕೇಂದ್ರದ ‘ಆತ್ಮನಿರ್ಭರ ಭಾರತʼಕ್ಕೂ ಪೂರಕವಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, 22,533 ‘ಮೇಕ್ ಇನ್ ಇಂಡಿಯಾ’ ವೆಂಟಿಲೇಟರ್ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ತಲುಪಿಸಲಾಗಿದೆ ಮತ್ತು ಅವುಗಳ ಅಳವಡಿಕೆ ಮತ್ತು ಕಾರ್ಯಾರಂಭವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಅವುಗಳ ಪ್ರಯತ್ನಗಳಿಗೆ ಪೂರಕವಾಗಿ ರಾಜ್ಯಗಳು ಮತ್ತು ಯುಟಿಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಕೇಂದ್ರ ಹೇಳಿದೆ. ಆರೋಗ್ಯ ಸಚಿವಾಲಯವು 30 ಮಿಲಿಯನ್ ಎನ್ 95 ಮುಖವಾಡಗಳನ್ನು ಮತ್ತು 12.8 ಮಿಲಿಯನ್ ಪಿಪಿಇ ಕಿಟ್ಗಳನ್ನು ಆರೋಗ್ಯ ಕಾರ್ಯಕರ್ತರಿಗೆ ವಿವಿಧ ರಾಜ್ಯದಾದ್ಯಂತ ವಿತರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹೆಚ್ಚುವರಿಯಾಗಿ, 10.8 ಕೋಟಿಗಿಂತ ಹೆಚ್ಚು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯು) ಮಾತ್ರೆಗಳನ್ನು ವಿತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.