ನವದೆಹಲಿ: ಖ್ಯಾತ ಹೆಲ್ಮೆಟ್ ತಯಾರಕ ಸ್ಟಡ್ಸ್ ಆಕ್ಸೆಸರೀಸ್ ಹರಿಯಾಣದ ಫರಿದಾಬಾದ್ನಲ್ಲಿ ಏಷ್ಯಾದ ಅತಿದೊಡ್ಡ ಹೆಲ್ಮೆಟ್ ಉತ್ಪಾದನಾ ಸೌಲಭ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ.
5.5 ಎಕರೆ ವಿಸ್ತೀರ್ಣದಲ್ಲಿ ಹರಡಿರುವ, ಒಟ್ಟಾರೆ 200 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿರುವ ಈ ಸೌಲಭ್ಯವು ಕೆಲವು ಕಂಪನಿಗಳ ಅತ್ಯಂತ ಜನಪ್ರಿಯ ಮೋಟಾರ್ಸೈಕಲ್ ಹೆಲ್ಮೆಟ್ಗಳಾದ ಶಿಫ್ಟರ್ ಮತ್ತು ಥಂಡರ್ ಸರಣಿಗಳನ್ನು ಉತ್ಪಾದಿಸುವುದಲ್ಲದೆ, ದೇಶೀಯ ಮಾರುಕಟ್ಟೆಗೆ ಬೈಸಿಕಲ್ ಹೆಲ್ಮೆಟ್ಗಳ ಉತ್ಪಾದನೆಗೆ ಸಹಕರಿಸುತ್ತದೆ.
ಸ್ಟಡ್ಸ್ ಇತ್ತೀಚೆಗಷ್ಟೇ ತನ್ನ ಒಂದು ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಇದು ಇನ್-ಹೌಸ್ ಎಕ್ಸ್ಪಾಂಡೆಡ್ ಪಾಲಿಸ್ಟೈರೀನ್ (ಇಪಿಎಸ್) ಉತ್ಪಾದನಾ ಮಾರ್ಗವನ್ನು ಹೊಂದಿರುವ ಭಾರತದ ಏಕೈಕ ಸೌಲಭ್ಯವಾಗಿದೆ.
ಸ್ಟಡ್ಸ್ ಆಕ್ಸೆಸರೀಸ್ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಭೂಷಣ್ ಖುರಾನಾ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ನಾವು ಕೋವಿಡ್ ಯುಗದಲ್ಲಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಸ್ಟಡ್ಸ್ನಲ್ಲಿರುವ ನಮ್ಮೆಲ್ಲರಿಗೂ ಉತ್ಪಾದನಾ ಘಟಕ ತೆರೆದಿರುವುದು ಒಂದು ದೊಡ್ಡ ಮೈಲಿಗಲ್ಲ” ಎಂದು ಹೇಳಿದ್ದಾರೆ.
“ಈ ಹಂತವು ಜಗತ್ತಿನಾದ್ಯಂತ ಮೇಕ್ ಇನ್ ಇಂಡಿಯಾ ಕಡೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಮಾರುಕಟ್ಟೆ ನಾಯಕರಾಗಿ ನಮ್ಮ ಪಾತ್ರವನ್ನು ಪುನರುಚ್ಚರಿಸಿದ್ದೇವೆ” ಎಂದಿದ್ದಾರೆ.
ಈ ಹೂಡಿಕೆಯು ಹರಿಯಾಣದ ಕೈಗಾರಿಕಾ ನಗರವಾದ ಫರಿದಾಬಾದ್ಗೆ ಉತ್ತೇಜನಕಾರಿಯಾಗಿದೆ, ಈ ನಗರ ಟ್ರಾಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ಹೊಂದಿರುವ ಎಸ್ಕೋರ್ಟ್ಸ್ ಲಿಮಿಟೆಡ್ ಸೇರಿದಂತೆ ಕೆಲವು ಪ್ರಸಿದ್ಧ ಭಾರತೀಯ ಉತ್ಪಾದನಾ ದೈತ್ಯರಿಗೆ ನೆಲೆ ಕಲ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.