ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂರ್ಕಿ (ಐಐಟಿ-ಆರ್) ಪ್ರಮುಖ ಆನ್ಲೈನ್ ಲರ್ನಿಂಗ್ ಪ್ಲಾಟ್ಫಾರ್ಮ್ ಕೊರ್ಸೆರಾ ಸಹಯೋಗದೊಂದಿಗೆ ಗುರುವಾರ ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೆಷಿನ್ ಲರ್ನಿಂಗ್ನಲ್ಲಿ ಕೌಶಲ್ಯ ಬೆಳೆಸಲು ಬಯಸುವ ವೃತ್ತಿಪರರಿಗಾಗಿ ಎರಡು ಹೊಸ ಆನ್ಲೈನ್ ಪ್ರಮಾಣಪತ್ರ ಪ್ರೋಗ್ರಾಂಗಳನ್ನು ಪ್ರಾರಂಭಿಸಿದೆ.
ಎಐ ಮತ್ತು ಎಂಎಲ್ನಲ್ಲಿ ಆರು ತಿಂಗಳ ಪ್ರಮಾಣಪತ್ರ ಪ್ರೋಗ್ರಾಂ ವೀಡಿಯೊ ಉಪನ್ಯಾಸಗಳು, ಕಲಿಕೆಯ ಅವಕಾಶಗಳು, ತಂಡದ ಯೋಜನೆಗಳು, ಟ್ಯುಟೋರಿಯಲ್ ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ ಎಂದು ವರದಿಗಳು ತಿಳಿಸಿವೆ.
ಪ್ರೋಗ್ರಾಂ ಸಾಂಪ್ರದಾಯಿಕ ಎಂಎಲ್ ತಂತ್ರಗಳನ್ನು ಕಲಿಸುತ್ತದೆ ಮತ್ತು ಮಾದರಿ ನಿರ್ಮಾಣ, ದೃಢವಾದ ಎಂಎಲ್ ಉತ್ಪಾದನೆ ಮತ್ತು ಶಕ್ತಿಯುತ ಪ್ರಯೋಗಕ್ಕಾಗಿ ‘ಟೆನ್ಸರ್ಫ್ಲೋ’ ಸಾಫ್ಟ್ವೇರ್ನೊಂದಿಗೆ ಪ್ರೋಗ್ರಾಮಿಂಗ್ ಅನುಭವವನ್ನು ನೀಡುತ್ತದೆ.
ದತ್ತಾಂಶ ವಿಜ್ಞಾನದಲ್ಲಿನ ಪ್ರಮಾಣಪತ್ರ ಕಾರ್ಯಕ್ರಮವು ವೃತ್ತಿಪರರಿಗೆ ದತ್ತಾಂಶ ವಿಜ್ಞಾನ, ಯಂತ್ರ ಕಲಿಕೆ, ವಿಮರ್ಶಾತ್ಮಕ ಚಿಂತನೆ, ದತ್ತಾಂಶ ಸಂಗ್ರಹಣೆ, ದತ್ತಾಂಶ ದೃಶ್ಯೀಕರಣ ಮತ್ತು ದತ್ತಾಂಶ ನಿರ್ವಹಣೆಯಲ್ಲಿ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.
“ಹೊಸ ಶಿಕ್ಷಣ ನೀತಿಯ ಅಂತರ್ಗತ ಶಿಕ್ಷಣದ ಗುರಿಯನ್ನು ಪೂರೈಸಲು ಸಹಾಯ ಮಾಡಲು ನಾವು ಕೋರ್ಸೆರಾದೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ” ಎಂದು ಐಐಟಿ ರೂರ್ಕಿಯ ನಿರ್ದೇಶಕ ಪ್ರೊಫೆಸರ್ ಅಜಿತ್ ಕೆ ಚತುರ್ವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಐಟಿ ರೂರ್ಕಿ ಈ ಎರಡೂ ಕಾರ್ಯಕ್ರಮಗಳನ್ನು 2021 ರ ಆರಂಭದಲ್ಲಿ ಕೋರ್ಸೆರಾ ವೇದಿಕೆಯಲ್ಲಿ ಪ್ರಾರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.