ನವದೆಹಲಿ: ಮಂಗಳವಾರ ದೇಶದಲ್ಲಿ 7.33 ಲಕ್ಷ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಸಾಂಕ್ರಾಮಿಕಗೆ ದೇಶಾದ್ಯಂತ ಇದುವರೆಗೆ 2.6 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಕಿ ಅಂಶಗಳು ತಿಳಿಸಿವೆ.
ಪ್ರಸ್ತುತ, ದೇಶಾದ್ಯಂತ ಒಟ್ಟು 1,421 ಪ್ರಯೋಗಾಲಯಗಳು ಕೋವಿಡ್ -19 ಪರೀಕ್ಷೆಗಳನ್ನು ನಡೆಸುತ್ತಿವೆ. ಈ ಪೈಕಿ 944 ಸರ್ಕಾರಿ, 477 ಖಾಸಗಿ ಪ್ರಯೋಗಾಲಯಗಳಾಗಿವೆ.
ಆಗಸ್ಟ್ 11 ರಂದು ಕೋವಿಡ್ -19 ಗಾಗಿ 7,33,449 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
“ಆಗಸ್ಟ್ 11 ರವರೆಗೆ ದೇಶದಲ್ಲಿ ಪರೀಕ್ಷಿಸಿದ ಒಟ್ಟು ಕೋವಿಡ್-19 ಮಾದರಿಗಳ ಸಂಖ್ಯೆ 2,60,15,297 ಆಗಿದೆ. ಇದರಲ್ಲಿ ಮಂಗಳವಾರ ಪರೀಕ್ಷಿಸಿದ ಸಂಖ್ಯೆ 7,33,449 ಮಾದರಿಗಳು ಸೇರಿದೆ” ಎಂದು ಐಸಿಎಂಆರ್ ಬುಧವಾರ ಟ್ವಿಟರ್ನಲ್ಲಿ ಹಂಚಿಕೊಂಡ ಬುಲೆಟಿನ್ ನಲ್ಲಿ ತಿಳಿಸಿದೆ.
ಈ ನಡುವೆ ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಬುಧವಾರ 23.29 ಲಕ್ಷಕ್ಕೆ ಏರಿದೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 60,963 ಹೊಸ ಕೊರೋನಾವೈರಸ್ ಪ್ರಕರಣಗಳು ಮತ್ತು 834 ಸಾವುಗಳು ವರದಿಯಾಗಿವೆ.
ಪ್ರಸ್ತುತ, 6,43,948 ಪ್ರಕರಣಗಳು ಸಕ್ರಿಯವಾಗಿದ್ದು, ಭಾರತದಲ್ಲಿ 1,639,599 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 46,091 ಸಾವುನೋವುಗಳು ವರದಿಯಾಗಿವೆ.
COVID-19 Testing Update . For more details visit: https://t.co/dI1pqvXAsZ #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/XXmmE1nXOe
— ICMR (@ICMRDELHI) August 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.