ಹೌಸ್ಟ್ನ್: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಗಂಭೀರ ಪ್ರತಿಸ್ಪರ್ಧಿಯೆಂದೇ ಭಾವಿಸಲಾಗಿದ್ದ ಗೂಗಲ್ ಪ್ಲಸ್ನ್ನು ಕೈಬಿಡುವ ಬಗ್ಗೆ ಗೂಗಲ್ ಚಿಂತಿಸಿದೆ.
ದೈತ್ಯ ಜಾಲತಾಣ ಗೂಗಲ್ ಕಳೆದ ಕೆಲವು ತಿಂಗಳುಗಳಿಂದ ಗೂಗಲ್ ಪ್ಲಸ್ನ ಹಲವು ಸೇವೆಗಳನ್ನು ವಿಭಜಿಸುತ್ತಾ ಬಂದಿದ್ದು, ಗೂಗಲ್ ಅನ್ನು ಪ್ರತ್ಯೇಕ ಸೇವೆಗಳಿಗೆ ಬಳಸುವ ಮೂಲಕ ಗೂಗಲ್ನ ಎಲ್ಲಾ ಚಟುವಟಿಕೆಗಳಿಗೂ ಪ್ರಮುಖ ತಾಣವಾಗಿ ಮಾಡುವ ಯೋಜನೆ ಹೊಂದಿದೆ.
ಗೂಗಲ್ ಇನ್ನು ಮುಂದೆ ವ್ಯಾಪಕ ಬದಲಾವಣೆ ತರಲಿದ್ದು, ಸ್ಟ್ರೀಮ್ಸ್ ಹಾಗೂ ಫೋಟೋಗಳನ್ನು ಪ್ರತ್ಯೇಕಿಸಲಿದೆ. ಇದರೊಂದಿಗೆ ಸಾಮಾಜಿಕ ನೆಟ್ವರ್ಕ್ ಆಗಿರುವ ಗೂಗಲ್ ಪ್ಲಸ್ ಕಲೆಕ್ಷನ್ಸ್ ಅನ್ನು ಕೂಡ ಅಳವಡಿಸಲಿದೆ. ಆದರೆ ಗೂಗಲ್ ಪ್ಲಸ್ನ ಸ್ಥಳ ಹಂಚಿಕೆ ಸಾಮರ್ಥ್ಯ (ಲೊಕೇಶನ್ ಶೇರಿಂಗ್ ಸಾಮರ್ಥ್ಯ)ವನ್ನು ಹ್ಯಾಂಗೌಟ್ಸ್ಗೆ ಬದಲಿಸಲಿದೆ.
ಯೂಟ್ಯೂಬ್ ಸೇರಿದಂತೆ ಇನ್ನಿತರ ನೆಟ್ವರ್ಕ್ಗಳನ್ನು ವೀಕ್ಷಿಸಲು ಗೂಗಲ್ ಪ್ಲಸ್ ಅಕೌಂಟ್ ಕಡ್ಡಾಯವಾಗಿತ್ತು. ಆದರೆ ಇವೆಲ್ಲದಕ್ಕೆ ಪ್ರತ್ಯೇಕ ಅಕೌಂಟ್ ನಿರ್ವಹಿಸಬೇಕೆಂಬ ಗ್ರಾಹಕರ ಕೋರಿಕೆಯಂತೆ ಇವುಗಳನ್ನು ಪ್ರತ್ಯೇಕಿಸಲಾಗುವುದು. ಇದು ಗೂಗಲ್ ಪ್ಲಸ್ನ ಸಾಂಕೇತಿಕ ಅಂತ್ಯವನ್ನು ಕಾಣಲಿದೆ ಎಂದು ಹೊರೊವಿಜ್ ತಿಳಿಸಿದ್ದಾರೆ.
ಫೇಸ್ಬುಕ್ನಿಂದಾಗಿ ಕಳೆದ 2013ರಲ್ಲಿ ಪ್ರತಿ ತಿಂಗಳು 300 ಮಿಲಿಯನ್ಗೂ ಅಧಿಕ ಗೂಗಲ್ ಪ್ಲಸ್ ಬಳಕೆದಾರರ ಸಂಖ್ಯೆಯು 2015ರ ಎಪ್ರಿಲ್ಗೆ 111 ಮಿಲಿಯನ್ಗೆ ಇಳಿದಿದೆ ಎಂದು ಗೂಗಲ್ ಪ್ಲಸ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.