ವಾಷಿಂಗ್ಟನ್: ಭಾರತದ ವಿರುದ್ಧ ಕೀಳು ಮಟ್ಟದ ಬುದ್ಧಿ ಪ್ರದರ್ಶನ ಮಾಡುತ್ತಿರುವ, ಆಕ್ರಮಣಕಾರಿ ನೀತಿಯ ಮೂಲಕ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಮತ್ತು ಅಲ್ಪಸಂಖ್ಯಾತ ಸಮುದಾಯ ಉಯಿಘರ್ನ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಚೀನಾದ ವಿರುದ್ಧ ಅಮೆರಿಕಾದ ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.
ಚೀನಾದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ, ಅಲ್ಲಿನ ಕಮ್ಯೂನಿಸ್ಟ್ ಪಕ್ಷ ಮತ್ತು ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ, ವಾಷಿಂಗ್ಟನ್ನ ನ್ಯಾಷನಲ್ ಮಾಲ್ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕೊರೋನಾ ನಿಯಂತ್ರಣ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಶಾಂತಿಯುತ ಪ್ರತಿಭಟನೆಯನ್ನು ನಡೆಸಿದರು.
ಸಂಪೂರ್ಣ ಜಗತ್ತು ಚೀನಾದ ಕೊರೋನಾ ಎಂಬ ವೈರಸ್ನಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಾರಿ ಹುಡುಕುತ್ತಿದ್ದರೆ, ಚೀನಾ ಮಾತ್ರ ಭಾರತ ಮತ್ತು ಇತರ ರಾಷ್ಟ್ರಗಳ ಮೇಲೆ ಆಕ್ರಮಣಕಾರಿ ನೀತಿಯನ್ನು ಪ್ರದರ್ಶನ ಮಾಡುತ್ತಿದೆ. ಭಾರತದ ಲಡಾಕ್ನ ಗಲ್ವಾನ್ ಗಡಿಯಲ್ಲಿ ಕಾಲ್ಕೆರೆದುಕೊಂಡು ಸಂಘರ್ಷ ನಡೆಸಿರುವ ಚೀನಾ ಆ ಮೂಲಕ ಕೆಣಕುವ ಕೆಲಸ ಮಾಡುತ್ತಿದೆ. ಚೀನಾಗೆ ಬುದ್ಧಿ ಕಲಿಸುವ ಸಮಯ ಇಡೀ ವಿಶ್ವಕ್ಕೆ ಈಗ ಕೂಡಿ ಬಂದಿದೆ ಎಂದು ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಸಂಘಟನೆಯ ಅಧ್ಯಕ್ಷ ಪ್ರಸಾದ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಭಾರತೀಯ ಅಮೆರಿಕನ್ ರಿಪಬ್ಲಿಕನ್ ಮತ್ತು ಪ್ರೌಡ್ ಅಮೆರಿಕನ್ ಪೊಲಿಟಿಕಲ್ ಕ್ರಿಯಾ ಸಮಿತಿಯ ಸಂಸ್ಥಾಪಕ ಪುನೀತ್ ಅಹ್ಲುವಾಲಿಯಾ, ಚೀನಾ ಉಯಿಘರ್ ಸಮುದಾಯ ಮತ್ತು ಹಾಂಕಾಂಗ್ನ ಜನರ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ. ಅದಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಚೀನಾದ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ನಿಷೇಧಿಸುವ ಮೂಲಕ ಅದಕ್ಕೆ ಆರ್ಥಿಕ ಹೊಡೆತ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಕ್ಕೆ ಭಾರತೀಯ ಮೂಲದ ಅಮೆರಿಕನ್ನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.