ಶಿಲ್ಲಾಂಗ್: ತನ್ನ ರಕ್ಷಣೆಗೆ ತೊಂದರೆಗಳನ್ನು ಎದುರಿಸಿದ ಭದ್ರತಾ ಪಡೆಯ ಸಿಬ್ಬಂದಿಗೆ ಸಾವಿನ ಕೊನೆ ಕ್ಷಣದಲ್ಲಿ ಮಾಜಿ ರಾಷ್ಟ್ರಪತಿ ಅವನನ್ನು ಭೇಟಿ ಮಾಡಿ ಆತನಿಗೆ ಶಬ್ಬಾಸ್ಗಿರಿ ನೀಡಿದ್ದಾರೆ.
ಗುವಾಹಟಿಯಿಂದ ಶಿಲ್ಲಾಂಗ್ಗೆ ರಸ್ತೆ ಮೂಲಕ ಆಗಮಿಸುವಾಗ ಅವರ ಭದ್ರತೆಗಾಗಿ ನಿಯೋಜಿಸಿದ್ದ ಸ್ಪೆಷಲ್ ಆಪರೇಶನ್ ಟೀಮ್ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿತ್ತು, 3 ಜನರಿದ್ದ ಜೀಪ್ ಒಂದರಲ್ಲಿ ಒಬ್ಬ ಶಿಲ್ಲಾಂಗ್ ಬರುವವರೆಗೂ ನಿಂತೇ ಇದ್ದ. ಇದನ್ನು ಗಮನಿಸಿದ್ದ ಕಲಾಂ ಆತನನ್ನು ತಮ್ಮ ಬಳಿ ಕರೆಸಿಕೊಂಡು ಶಬ್ಬಾಶ್ ಗಿರಿ ನೀಡಿದ್ದಾರೆ.
ಕಲಾಂ ಕರೆಯುತ್ತಿರುವುದನ್ನು ಕಂಡು ಒಂದು ಕ್ಷಣ ತಬ್ಬಿಬ್ಬಾದೆ, ಅವರು ನನಗೆ ‘ಧನ್ಯವಾದಗಳು, ಏನಾದರೂ ತಿನ್ನುತ್ತೀರಾ ? ನನಗೋಸ್ಕರ ನೀವು ಇಷ್ಟು ಕಾಲ ನಿಂತೇ ಇರಬೇಕಾಯಿತು. ಸಾರಿ’ ಎಂದು ಹೇಳಿದಾಗ ಬೆರಗಾದೆ. ಅಷ್ಟೊಂದು ಗಣ್ಯ ವ್ಯಕ್ತಿ ಕೂಡ ನಮ್ಮ ಸಾಮಾನ್ಯ ಕಾರ್ಯವನ್ನು ಗಮನಿಸಿದರಲ್ಲ ಎಂದು ಅಚ್ಚರಿಯಾಯಿತು ಎನ್ನುತ್ತಾರೆ ಖರಕರಂಗ್. ಈ ಮಾತನ್ನು ಕೇಳಿ ಖರಕರಂಗ್ ಕಲಾಂರವರಿಗೆ ‘ಸರ್, ನಿಮಗಾಗಿ ನಾನು 6 ಗಂಟೆಗಳ ಕಾಲ ಬೇಕಾದರೂ ನಿಂತೇ ಇರಲು ಸಾಧ್ಯ’ ಎಂದರಂತೆ.
ಆದರೆ ಅದಾದ ಸ್ವಲ್ಪ ಸಮಯದ ನಂತರ ಕಲಾಂ ಕುಸಿದು ಬಿದ್ದು ಮೃತರಾಗಿದ್ದಾರೆ. ಅವರಂತಹ ಸರಳ, ಧೀಮಂತ ವ್ಯಕ್ತಿಯನ್ನು ಕಳೆದುಕೊಂಡು ದೇಶ ಶೋಕಸಾಗರದಲ್ಲಿ ಮುಳುಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.