ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ವಿಶಿಷ್ಟ ದೇಶಭಕ್ತಿಯ ಚಲನಚಿತ್ರೋತ್ಸವ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ತಿಂಗಳ 21 ರವರೆಗೆ ಇದು ಮುಂದುವರೆಯಲಿದೆ.
ಆನ್ಲೈನ್ ದೇಶಭಕ್ತಿಯ ಚಲನಚಿತ್ರೋತ್ಸವದೊಂದಿಗೆ ನಾವು 73 ವರ್ಷಗಳ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಉತ್ಸವವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯವನ್ನು ಸೂಚಿಸುವ ಭಾರತೀಯ ಇತಿಹಾಸವನ್ನು ತೋರಿಸುತ್ತದೆ ಮತ್ತು ಜಗತ್ತಿನಾದ್ಯಂತ ಭಾರತೀಯರಲ್ಲಿ ಹಬ್ಬದ ಮತ್ತು ದೇಶಭಕ್ತಿಯ ಮನಸ್ಥಿತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಳಿ, ಗುಜರಾತಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಚಲನಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಸರ್ ರಿಚರ್ಡ್ ಅಟೆನ್ಬರೋ ಅವರ ‘ಗಾಂಧಿ’ ಚಿತ್ರದ ವಿಶೇಷ ಆವೃತ್ತಿಯನ್ನು ಸಹ ಪ್ರದರ್ಶಿಸಲಾಗುವುದು ಮತ್ತು ದೃಷ್ಟಿ ಮತ್ತು ಶ್ರವಣದೋಷವುಳ್ಳ ಜನರು ಕೂಡ ಇದನ್ನು ಆನಂದಿಸಬಹುದು.
ಉತ್ಸವವು www.cinemasofindia.com ವೆಬ್ಸೈಟ್ನಲ್ಲಿ ಪ್ರತಿದಿನ ಉತ್ತಮ ಗುಣಮಟ್ಟದ ಸ್ವಾತಂತ್ರ್ಯ ದಿನದ ವಿಷಯದ ದೇಶಭಕ್ತಿಯ ಚಲನಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತದೆ.
Starting today, watch an exciting line up of 43 films based on India’s #freedom struggle on #NFDC‘s first ever free of cost online #PatrioticFilmFestival .
Special edition of #Gandhi for people with vision & hearing impairment will also be aired.
Info: https://t.co/it73UnCPPE pic.twitter.com/UOZuiMvlsQ— Prakash Javadekar (@PrakashJavdekar) August 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.