ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಅಮೆರಿಕಾದ ಕಾರ್ಯದರ್ಶಿ ಮೈಕ್ ಪೊಂಪಿಯೊ ದೂರವಾಣಿ ಮೂಲಕ ಮಾತುಕತೆಯನ್ನು ನಡೆಸಿದರು. ಈ ವೇಳೆ ಉಭಯ ನಾಯಕರು ಅಂತರರಾಷ್ಟ್ರೀಯ ಕಾಳಜಿಯ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರ, ಕೋವಿಡ್ -19 ಸಾಂಕ್ರಾಮಿಕ ಮತ್ತು ಇಂಡೋ- ಪೆಸಿಫಿಕ್ ಪ್ರದೇಶ ಮುಂತಾದ ವಿಷಯಗಳ ಬಗ್ಗೆ ಪರಸ್ಪರ ಚರ್ಚಿಸಿದರು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡೋ-ಪೆಸಿಫಿಕ್ ಮತ್ತು ಜಗತ್ತಿನಾದ್ಯಂತ ಶಾಂತಿ, ಸಮೃದ್ಧಿ ಮತ್ತು ಭದ್ರತೆಯನ್ನು ಮುನ್ನಡೆಸಲು ಭಾರತ-ಯುಎಸ್ ಸಂಬಂಧದ ಬಲವನ್ನು ಜೈಶಂಕರ್ ಮತ್ತು ಪೊಂಪಿಯೊ ಇಬ್ಬರೂ ಪುನರುಚ್ಚರಿಸಿದ್ದಾರೆ ಎಂದು ಯುಎಸ್ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಕೇಲ್ ಬ್ರೌನ್ ಗುರುವಾರ ಹೇಳಿದ್ದಾರೆ.
ಟ್ವಿಟ್ ಮಾಡಿರುವ ಪೊಂಪಿಯೊ, “ಅಫ್ಘಾನಿಸ್ಥಾನದಲ್ಲಿ ಶಾಂತಿಯನ್ನು ಹೆಚ್ಚಿಸಲು ಮತ್ತು ಎಲ್ಲಾ ದೇಶಗಳು ಏಳಿಗೆ ಹೊಂದಬಹುದಾದ ಸುರಕ್ಷಿತ ಮತ್ತು ಸಾರ್ವಭೌಮ ಇಂಡೋ-ಪೆಸಿಫಿಕ್ಗೆ ಸಂಬಂಧಿಸಿದಂತೆ ನಾವು ಒಗ್ಗಟ್ಟಿನಿಂದ ಇರುತ್ತೇವೆ” ಎಂದಿದ್ದಾರೆ.
ಚೀನಾ ತನ್ನ ಪ್ರಭಾವವನ್ನು ಹರಡಲು ಪ್ರಯತ್ನಿಸುತ್ತಿರುವ ಸಂಪನ್ಮೂಲ-ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಭಾರತ ಮತ್ತು ಯುಎಸ್ ಅನ್ವೇಷಿಸಿವೆ, ಆದರೆ ಕಾರ್ಯತಾಂತ್ರಿಕ ಮಹತ್ವದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ವಿಶಾಲವಾದ ಪಾತ್ರವನ್ನು ವಹಿಸಲು ಅಮೆರಿಕ ಸಹಕಾರ ನೀಡುತ್ತಿದೆ.
ಭಾರತ, ಯುಎಸ್ ಮತ್ತು ಇತರ ಹಲವಾರು ವಿಶ್ವ ಶಕ್ತಿಗಳು ಈ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಮಿಲಿಟರಿ ಕುಶಲತೆಯ ಹಿನ್ನೆಲೆಯಲ್ಲಿ ಮುಕ್ತ, ಸ್ವತಂತ್ರ ಮತ್ತು ಅಭಿವೃದ್ಧಿ ಹೊಂದುತ್ತಿರುವ ಇಂಡೋ-ಪೆಸಿಫಿಕ್ ಅನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡುತ್ತಿವೆ.
“ಪೂರ್ಣ ಪ್ರಮಾಣದ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ನಿಕಟ ಸಹಕಾರವನ್ನು ಮುಂದುವರಿಸಲು ಎರಡೂ ನಾಯಕರು ಒಪ್ಪಿಕೊಂಡರು ಮತ್ತು ಈ ವರ್ಷದ ಕೊನೆಯಲ್ಲಿ ಚತುರ್ ಆಯಾಮ ಸಮಾಲೋಚನೆ ಮತ್ತು ಯುಎಸ್-ಇಂಡಿಯಾ 2 + 2 ಮಂತ್ರಿ ಸಂವಾದವನ್ನು ಎದುರು ನೋಡುತ್ತಿದ್ದಾರೆ” ಎಂದು ಸಂಭಾಷಣೆಯ ಬಳಿಕ ಬ್ರೌನ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.