ನವದೆಹಲಿ: ಕಾಲ ಬದಲಾದಂತೆ, ಆಧುನಿಕ ಜೀವನ ಪದ್ಧತಿಗೆ ಒಗ್ಗಿಕೊಂಡ ಮನುಷ್ಯನಲ್ಲಿ ಮಾನವೀಯತೆಯ ಅಂಶಗಳು ಕಡಿಮೆಯಾಗುತ್ತಿವೆಯೇನೋ ಎಂದನಿಸುವ ನಡುವೆಯೇ, ಕೆಲವೊಮ್ಮೆ ಕೆಲವು ಘಟನೆಗಳು, ಕೆಲವು ಜನರು ಮಾನವೀಯ ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ವ್ಯಕ್ತಿಯೊಬ್ಬರು ನಡುರಸ್ತೆಯಲ್ಲೇ ಪಕ್ಷಿಗಳನ್ನು ಮಾರಾಟ ಮಾಡುವ ಓರ್ವನಿಂದ ಹಕ್ಕಿಗಳನ್ನು ಖರೀದಿಸಿ, ಅವುಗಳನ್ನು ಸ್ವಚ್ಛಂದವಾಗಿ, ಸ್ವತಂತ್ರವಾಗಿ ಹಾರಲು ಬಿಡುವ ಮೂಲಕ ಜನರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
ಈ ವಿಡಿಯೋವನ್ನು ಹಿರಿಯ ಸರ್ಕಾರಿ ಅಧಿಕಾರಿ ದಯಾನಂದ ಕಾಂಬ್ಳೆ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದು, ತನ್ನ ಉತ್ತಮ ಕೆಲಸದಿಂದಲೇ ಈ ವ್ಯಕ್ತಿ ಸಜ್ಜನರ ಹೃದಯವನ್ನು ಗೆದ್ದುಕೊಂಡಿದ್ದಾರೆ. ‘ಫ್ರೀಡಂ ಈಸ್ ಬೀಯಿಂಗ್ ಯು, ವಿತೌಂಟ್ ಎನೀಒನ್ಸ್ ಪರ್ಮಿಷನ್’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಾಹನವೊಂದರಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು, ಹಕ್ಕಿಗಳನ್ನು ಮಾರುವವರಿಂದ ಎಲ್ಲಾ ಹಕ್ಕಿಗಳನ್ನೂ ಖರೀದಿ ಮಾಡಿ, ಒಂದೊಂದನ್ನೇ ಹಾರಿಸಿ ಬಿಡುವ ಮೂಲಕ ಅವುಗಳನ್ನು ಸ್ವತಂತ್ರ್ಯಗೊಳಿಸುವುದು ಕಂಡು ಬರುತ್ತಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ನೆಟ್ಟಿಗರನೇಕರು ಮೆಚ್ಚುಗೆ ಸೂಚಿಸಿದ್ದು, ಲೈಕ್, ಶೇರ್ಗಳ ಮೂಲಕ ಇವರ ಈ ಕಾರ್ಯವನ್ನು ಮತ್ತಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಈ ವ್ಯಕ್ತಿಯ ಮಾನವೀಯತೆಯೇ ಇವರನ್ನು ಸಮಾಜದ ದೃಷ್ಟಿಯಲ್ಲಿ ನಾಯಕನನ್ನಾಗಿ ಮಾಡಿದ್ದು ಮಾತ್ರ ಸುಳ್ಳಲ್ಲ.
This man is buying birds just to set them free pic.twitter.com/woc0BXo14l
— Andrew (@ANDREW1ALBERTT) June 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.